ಪ್ಯಾರೀಸ್: ಮೊನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ ಸಂಬಂಧಪಟ್ಟಂತೆ ಬೆಲ್ಜಿಯಂ ಪೊಲೀಸರು ಮೂವರು ಭಯೋತ್ಪಾದಕರನ್ನೂ ಬಂಧಿಸಿದ್ದಾರೆ.
ಮೊನ್ನೆಯಷ್ಟೆ ಭಯೋತ್ಪಾದಕರು ಪ್ಯಾರೀಸ್ ನ ಹಲವಾರು ಕಡೆ ದಾಳಿ ನಡೆಸಿದ್ದರು. ಬೆಟಕ್ಲಾನ್ ಆಡಿಟೋರಿಯಂ ಬಳಿ ದಾಳಿ ನಡೆದ ವೇಳೆ ನಂಬರ್ ಪ್ಲೆಟ್ ಇರುವ ಕಾರು ಪತ್ತೆಯಾಗಿತ್ತು. ಈ ಮಾಹಿತಿ ಆಧಾರದ ಮೇರೆಗೆ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದರು.
ಬೆಟಕ್ಲಾನ್ ಕ್ರಾಸ್ ಬಳಿ ಸಿಸಿಟಿವಿಯಲ್ಲಿ ಕಾರಿನ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಬೆಲ್ಜಿಯಂ ಪೊಲೀಸರು, ಮೂವರು ಉಗ್ರರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ದಾಳಿ ನಡೆಸಿದ ಉಗ್ರನೊಬ್ಬನ ಸಂಬಂಧಿಕರಾಗಿದ್ದು, ಉಗ್ರನ ತಂದೆ, ಸಹೋದರರು ಎಂದು ತಿಳಿದು ಬಂದಿದೆ.
ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಉಗ್ರರ ದಾಳಿ ಘಟನೆಯಲ್ಲಿ 127 ಅಮಾಕರು ಮೃತ್ತಪಟ್ಟಿದ್ದು, 300 ಹೆಚ್ಚು ಜನರು ಗಾಯಗೊಂಡಿದ್ದಾರೆ.