ಭಯೋತ್ಪಾದನೆಯನ್ನು ಬುಡಸಮೇತ ಮಟ್ಟ ಹಾಕಬೇಕಿದೆ: ಮೋದಿ

ಜಿ-20 ಟರ್ಕಿ 2015 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಬುಡ ಸಮೇತ ಮತ್ತಾ ಹಾಕಬೇಕಿದೆ ಎಂದು ಹೇಳಿದ್ದಾರೆ.
ಜಿ-20 ಶೃಂಗಸಭೆಯಲ್ಲಿನರೇಂದ್ರ ಮೋದಿ
ಜಿ-20 ಶೃಂಗಸಭೆಯಲ್ಲಿನರೇಂದ್ರ ಮೋದಿ

ಟರ್ಕಿ: ಜಿ-20 2015 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಬುಡ ಸಮೇತ ಮಟ್ಟ ಹಾಕಬೇಕಿದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ನಲ್ಲಿ ನಡೆದಿರುವ ಭಯೋತ್ಪಾದನೆಯನ್ನು ನಾವೆಲ್ಲರೂ ಖಂಡಿಸಬೆಕಿದೆ. ಇಡಿ ವಿಶ್ವದ ಮಾನವ ಕುಲ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಕರೆ ನೀಡಿದ್ದು ಬ್ರಿಕ್ಸ್ ಸಂಘಟನೆಗೆ ಭಾರತ ಅತಿ ಹೆಚ್ಚು ಮಹತ್ವ ನೀಡುತ್ತದೆ, ಭಯೋತ್ಪಾದನೆ ಮಟ್ಟಾ ಹಾಕಲು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮೋದಿ ತಿಳಿಸಿದ್ದಾರೆ.    
ಬ್ರಿಟನ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ನ.15 ರಂದು ಟರ್ಕಿಯಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.  ನ.14 ರಂದು ಪ್ಯಾರಿಸ್ ನಲ್ಲಿ ದಾಳಿ ನಡೆಸಿದ್ದ ಐಸೀಸ್ ಉಗ್ರರು 120 ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com