ಪ್ಯಾರಿಸ್ ದಾಳಿ: ಆತ್ಮಾಹುತಿ ಎದೆಯಂಗಿ ಹುಟ್ಟಿಸಿದೆ ಭೀತಿ

ಉಗ್ರರು ಧರಿಸಿದ್ದ ಆತ್ಮಾಹುತಿ ಎದೆಯಂಗಿಯನ್ನು ಫ್ರಾನ್ಸ್ ಕಂಡಿದ್ದು ಇದೇ ಮೊದಲು. ಏಕೆಂದರೆ, ಇದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಯಾರಿಸ್: ಉಗ್ರರು ಧರಿಸಿದ್ದ ಆತ್ಮಾಹುತಿ ಎದೆಯಂಗಿಯನ್ನು ಫ್ರಾನ್ಸ್ ಕಂಡಿದ್ದು ಇದೇ ಮೊದಲು. ಏಕೆಂದರೆ, ಇದನ್ನು ಅತ್ಯಂತ ವೃತ್ತಿಪರ ವ್ಯಕ್ತಿಗಳು ತಯಾರಿಸಿರುವುದು ಸ್ಪಷ್ಟವಾಗಿದೆ ಎಂದು ಫ್ರಾನ್ಸ್‍ನ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. 

2005ರಲ್ಲಿ ಲಂಡನ್‍ನಲ್ಲಿ ನಡೆದ ದಾಳಿ ವೇಳೆ ಉಗ್ರರು ತಮ್ಮ ಬೆನ್ನ ಹಿಂದೆ ಸ್ಫೋಟಕಗಳನ್ನು ಹೇರಿಕೊಂಡು ಬಂದಿದ್ದರು. ಆದರೆ, ಶುಕ್ರವಾರದ ದಾಳಿ ವೇಳೆ ಉಗ್ರರು ಮಧ್ಯ ಪ್ರಾಚ್ಯದ ಮಾದರಿಯಲ್ಲಿ ಸ್ಫೋಟಕಗಳಿರುವ ಎದೆಯಂಗಿಯನ್ನೇ ಧರಿಸಿದ್ದರು. 
ಅಷ್ಟೇ ಅಲ್ಲ, ಸ್ವಲ್ಪವೂ ಹಿಂದೆ ಮುಂದೆ ನೋಡದೆ ಆತ್ಮಾಹುತಿ ಮಾಡಿಕೊಂಡರು. ಇಂತಹ ಎದೆಯಂಗಿ ತಯಾರಿಸ ಬೇಕೆಂದರೆ ಸ್ಫೋಟಕ ತಜ್ಞನೇ ಬೇಕು. ಇದನ್ನು ತಯಾರಿಸುವುದು ಸುಲಭವಲ್ಲ. ಸ್ಫೋಟಕಗಳನ್ನು ತಯಾರಿಸುವುದು ಹೇಗೆ, ಅದನ್ನು ಬೆಲ್ಟ್ ಅಥವಾ ಅಂಗಿಯಲ್ಲಿ ಅಳವಡಿಸುವುದು ಹೇಗೆ ಎಂಬ ಪ್ರತಿಯೊಂದು ಸೂಕ್ಷ್ಮವೂ ಆತನಿಗೆ ಗೊತ್ತಿರಬೇಕು. 
ಇದನ್ನು ಸಿರಿಯಾದಲ್ಲಿ ತಯಾರಿಸಿ ಇಲ್ಲಿಗೆ ತರಲು ಸಾಧ್ಯವೇ ಇಲ್ಲ. ಏಕೆಂದರೆ, ಅದು ಹೆಚ್ಚು ಅಲುಗಾಡಿದಷ್ಟೂ ಅಪಾಯ ಜಾಸ್ತಿ. ಹಾಗಾಗಿ ಫ್ರಾನ್ಸ್ ಅಥವಾ ಯುರೋಪ್‍ನಲ್ಲೇ ತಯಾರಿಸಿರುವ ಶಂಕೆಯಿದೆ. 
ಆತ್ಮಾಹುತಿ ಎದೆಯಂಗಿ ತಯಾರಿಸಿಕೊಟ್ಟ ಐಎಸ್ ಬಾಂಬ್ ತಯಾರಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com