ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಸ್ತಿತ್ವತ್ವದಲ್ಲಿದೆ: ಪಾಕ್ ದಿನ ಪತ್ರಿಕೆ

ಇಸ್ಲಾಮಿಕ್ ಸ್ಟೇಟ್(ಐಎಸ್) ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂದು ಪಾಕಿಸ್ತಾನ ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು
ಇಸ್ಲಾಮಿಕ್ ಸ್ಟೇಟ್ ಉಗ್ರರು

ಇಸ್ಲಾಮಾಬಾದ್: ಇಸ್ಲಾಮಿಕ್ ಸ್ಟೇಟ್(ಐಎಸ್) ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂದು ಪಾಕಿಸ್ತಾನ ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪಾಕಿಸ್ತಾನದಲ್ಲಿಲ್ಲ ಎಂದು ಇತ್ತೀಚೆಗೆ ಪಾಕ್ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಅಧಿಕಾರಿಗಳ ಹೇಳಿಕೆಗೆ ತದ್ವಿರುದ್ಧ ವರದಿ ಪ್ರಕಟಿಸಿರುವ ಪಾಕಿಸ್ತಾನದ ದಿನೇಷನ್ ದಿನಪತ್ರಿಕೆ,  ಪ್ಯಾರಿಸ್ ನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ಇಡೀ ವಿಶ್ವ ಒಂದಾಗಿದೆ.
ಇತ್ತ ಪಾಕಿಸ್ತಾನದ ವಿದೇಶಾಂಗ ಇಲಾಖೆ ರಾಷ್ಟ್ರದ ಯಾವುದೇ ಪ್ರಜೆಯೂ ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಸಂಪರ್ಕ ಹೊಂದಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಸ್ಥಿತ್ವವಿದ್ದು, ಈ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪತ್ರಿಕೆ ಸಂಪಾದಕೀಯ ಬರೆದಿದೆ. 
ಇತ್ತೀಚೆಗೆ ಕರಾಚಿಯ ಸಫೂರಾ ಚೌಕ್ ಬಳಿ ನಡೆದ ದಾಳಿಯಲ್ಲೂ ಐಎಸ್ ಉಗ್ರರ ಕೈವಾಡವಿದೆ. ಆದರೆ ಐಎಸ್ ಅಸ್ಥಿತ್ವವೇ ಇಲ್ಲ ಎನ್ನುತ್ತಿರುವ ಪಾಕಿಸ್ತಾನ ಸರ್ಕಾರ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ದಿ ನೇಷನ್ ಪತ್ರಿಕೆ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com