ಮಾಲಿ ದಾಳಿ: ಮೂವರು ಒತ್ತೆಯಾಳುಗಳ ಹತ್ಯೆ, 20 ಭಾರತೀಯರು ಸೇಫ್

ಮಾಲಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿದ್ದ 140 ಅತಿಥಿಗಳು ಹಾಗೂ 30 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 170 ಜನರನ್ನು ಒತ್ತೆಯಾಳಾಗಿರಿಸಿಕೊಂಡು...
ರ್ಯಾಡಿಸನ್ ಬ್ಲೂ ಹೋಟೆಲ್
ರ್ಯಾಡಿಸನ್ ಬ್ಲೂ ಹೋಟೆಲ್

ಬಮಾಕೊ: ಪ್ಯಾರಿಸ್ ನಲ್ಲಿ ಉಗ್ರರ ಅಟ್ಟಹಾಸ ಮರೆಯುವ ಮುನ್ನವೇ ಮಾಲಿ ರಾಜಧಾನಿ ಬಮಾಕೋದಲ್ಲಿ ಭಯೋತ್ಪಾದಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಉಗ್ರರು ಒತ್ತೆಯಾಳಾಗಿದ್ದ ಮೂವರನ್ನು ಕೊಂದಿದ್ದಾರೆ. ಇನ್ನೂ ಒತ್ತೆಯಾಳುಗಳ ಪೈಕಿ 20 ಮಂದಿ ಭಾರತೀರು ಇರುವುದಾಗಿ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಹೋಟೆಲ್ ರೂಮ್ ನಲ್ಲಿ ಕುರಾನ್ ಪಠಿಸಲು ಉಗ್ರರು ಹೇಳಿದ್ದಾರೆ. ಈ ವೇಳೆ ಕುರಾನ್ ಪಠಿಸಿದ 15 ಮಂದಿಯನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ.

ಮಾಲಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿದ್ದ 140 ಅತಿಥಿಗಳು ಹಾಗೂ 30 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 170 ಜನರನ್ನು ಶಸ್ತ್ರಧಾರಿ  ಇಬ್ಬರು ಉಗ್ರರು  ತಮ್ಮ ಒತ್ತೆಯಾಳಾಗಿಸಿಕೊಂಡಿದ್ದಾರೆ.

ಪೊಲೀಸರು ಹೋಟೆಲ್ ಅನ್ನು ಸುತ್ತುವರಿದಿದ್ದು, ಬಂದೂಕು ಹಿಡಿದಿದ್ದ ವ್ಯಕ್ತಿಯೊಬ್ಬ ಗಾಡ್ ಇಸ್ ಗ್ರೇಟ್ ಎಂದು ಅರೇಬಿಕ್ ಭಾಷೆಯಲ್ಲಿ ಕಿರುಚುತ್ತಾ ಹೋಟೆಲ್ ಒಳಗೆ ನುಗ್ಗಿದ ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದಾನೆ.

ಉಗ್ರರು ತಮ್ಮ ಕೈಯ್ಯಲ್ಲಿ ಬಂದೂಕು ಹಾಗೂ ಗ್ರೆನೈಡ್ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಹೋಟೆಲ್ ನಲ್ಲಿದ್ದ ಜನರನ್ನು ಒತ್ತೆಯಾಳಾಗಿಸಿಕೊಂಡಿರುವುದರ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಈ ಮೊದಲು ಅಂದರೆ 2012  ಹಾಗೂ 2013 ರಲ್ಲಿ ದಾಳಿ ನಡೆಸಿದ್ದ ಉಗ್ರರು ಮಾಲಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಮಾರ್ಚ್ ನಲ್ಲಿ  ಮುಸುಕುಧಾರಿ ಗನ್ ಮ್ಯಾನ್ ಗಳು ಬಮಾಕೊ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಐವರನ್ನು ಕೊಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com