ಗುರುನಾನಕ್ ಜಯಂತಿ ಆಚರಣೆ ಹಿನ್ನೆಲೆ ಪಾಕಿಸ್ತಾನಕ್ಕೆ ತೆರಳಲಿರುವ ಸಿಖ್ ಯಾತ್ರಿಕರು

ಮುಂದಿನ ವಾರದಲ್ಲಿ ಗುರುನಾನಕ್ ಅವರ 546 ನೇ ಜಯಂತಿ ಆಚರಣೆ ನಡೆಯಲಿದ್ದು, ಸಿಖ್ ಸಮುದಾಯದ ಅಪಾರ ಸಂಖ್ಯೆಯ ಭಕ್ತರು ಗುರುನಾನಕ್ ಅವರ ಜನ್ಮಸ್ಥಳವಿರುವ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ.
ಗುರುನಾನಕ್
ಗುರುನಾನಕ್

ಇಸ್ಲಾಮಾಬಾದ್: ಮುಂದಿನ ವಾರದಲ್ಲಿ ಗುರುನಾನಕ್ ಅವರ 546 ನೇ ಜಯಂತಿ ಆಚರಣೆ ನಡೆಯಲಿದ್ದು, ಸಿಖ್ ಸಮುದಾಯದ ಅಪಾರ ಸಂಖ್ಯೆಯ ಭಕ್ತರು ಗುರುನಾನಕ್ ಅವರ ಜನ್ಮಸ್ಥಳವಿರುವ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ.
ಲಾಹೋರ್ ನಲ್ಲಿರುವ ಇಂದಿನ ನಾನ್ಕನ ಸಾಹೇಬ್ ಸಿಟಿ ಗುರುನಾನಕ್ ಅವರ ಜನ್ಮ ಸ್ಥಳವೆಂಬುದು ಸಿಖ್ ಸಮುದಾಯದ ನಂಬಿಕೆಯಾಗಿದ್ದು, ವಿಶೇಷ ರೈಲುಗಳಲ್ಲಿ ನೂರಾರು ಮಂದಿ ಸಿಖ್ ಸಮುದಾಯದವರು ವಾಘ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಪಾಕಿಸ್ತಾನಕ್ಕೆ ನವೆಂಬರ್ 22 ರಂದು ತಲುಪಲಿರುವ ಸಿಖ್ ಯಾತ್ರಿಕರನ್ನು ಪಾಕಿಸ್ತಾನದ ಅಧಿಕಾರಿಗಳು ಸ್ವಾಗತಿಸಲಿದ್ದಾರೆ. ನವೆಂಬರ್ 25 ರಂದು ಗುರುನಾನಕ್ ಜನ್ಮದಿನಾಚರಣೆ ನಡೆಯಲಿದ್ದು ದೇಶ-ವಿದೇಶಗಳಿಂದ ಆಗಮಿಸುವ ಸಿಖ್ ಸಮುದಾಯದವರು ಭಾಗವಹಿಸಲಿದ್ದಾರೆ. ವಿಶ್ವಾದ್ಯಂತ ಕಾರ್ತಿಕ ಹುಣ್ಣಿಮೆಯಂದು ಗುರುನಾನಕ್ ಅವರ ಜನ್ಮದಿನಾಚರಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com