ವಿಶ್ವದ 2ನೇ ಅತಿ ದೊಡ್ಡ ವಜ್ರ ಆಫ್ರಿಕಾದಲ್ಲಿ ಪತ್ತೆ!

ವಿಶ್ವದಲ್ಲೇ ಎರಡನೇ ಅತಿ ದೊಡ್ಡ ವಜ್ರದ ತುಣುಕು ಆಫ್ರಿಕಾದ ಬೋಟ್ಸ್‌ವಾನಾದಲ್ಲಿ...
ಪತ್ತೆಯಾದ ವಿಶ್ವದ 2ನೇ ಅತಿ ದೊಡ್ಡ ವಜ್ರ
ಪತ್ತೆಯಾದ ವಿಶ್ವದ 2ನೇ ಅತಿ ದೊಡ್ಡ ವಜ್ರ
ಕೇಪ್ ಟೌನ್: ವಿಶ್ವದಲ್ಲೇ ಎರಡನೇ ಅತಿ ದೊಡ್ಡ ವಜ್ರದ ತುಣುಕು ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಪತ್ತೆಯಾಗಿದೆ.
ಆಫ್ರಿಕಾ ಖಂಡದ ಬೋಟ್ಸ್‌ವಾನಾದಿಂದ ಸುಮಾರು 500 ಕಿಲೋ ಮೀಟರ್ ಉತ್ತರದಲ್ಲಿರುವ ಕರೋವಿ ಗಣಿ ಪ್ರದೇಶದಲ್ಲಿ 1,111 ಕ್ಯಾರೆಟ್‌ನ ವಜ್ರ ಪತ್ತೆಯಾಗಿದ್ದು, ಇದರ ಶತಮಾನದಲ್ಲೇ ದೊರೆತ ದೊಡ್ಡ ಸಂಪತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 
ಈ ವಜ್ರದ ಬೆಲೆ ನಿಗದಿಪಡಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ಗಣಿ ಉಸ್ತುವಾರಿ ಹೊತ್ತಿರುವ ಕೆನಡಾ ಮೂಲದ ಲ್ಯೂಸಾರಾ ಡೈಮಂಡ್ ಕಂಪನಿಯ ಸಿಇಒ ವಿಲಿಯಮ್ ಲ್ಯಾಂಬ್ ತಿಳಿಸಿದ್ದಾರೆ. 
1905ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ 3106 ಕ್ಯಾರೆಟ್ ವಜ್ರವನ್ನು ಗಣಿಯಿಂದ ತೆಗೆದು ಬ್ರಿಟನ್ ರಾಣಿಯ ಕಿರೀಟದಲ್ಲಿ ಅಳವಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com