ವಿಮಾನದಲ್ಲಿ 70.39 ಲಕ್ಷ ಮಂದಿ ಪ್ರಯಾಣ

ಅಕ್ಟೋಬರ್‍ನಲ್ಲಿ 70.39 ಲಕ್ಷ ಮಂದಿ ದೇಶೀಯ ವಿಮಾನಯಾನ ಮಾರ್ಗಗಳಲ್ಲಿ ಸಂಚರಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‍ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಕ್ಟೋಬರ್‍ನಲ್ಲಿ 70.39 ಲಕ್ಷ ಮಂದಿ ದೇಶೀಯ ವಿಮಾನಯಾನ ಮಾರ್ಗಗಳಲ್ಲಿ ಸಂಚರಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‍ಗೆ ಹೋಲಿಸಿದರೆ ಶೇ.19ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ದೇಶೀಯ ವಿಮಾನಯಾನ ಕ್ಷೇತ್ರ ತನ್ನ ಪ್ರಗತಿಯನ್ನು ಮುಂದುವರೆಸಿದೆ.
ಕಡಿಮೆ ದರ ವಿಮಾನಯಾನ ಸೇವಾ ಕಂಪನಿ ಇಂಡಿಗೊ ಅಗ್ರ ಸ್ಥಾನದಲ್ಲಿದ್ದು ಶೇ.36.8ರಷ್ಟು ಮಾರುಕಟ್ಟೆ ಪಾಲು ಕಬಳಿಸಿದೆ. ಇಂಡಿಗೊ ವಿಮಾನಗಳಲ್ಲಿ 25.90 ಲಕ್ಷ ಮಂದಿ ಪ್ರಯಾಣಿಸಿದ್ದು ಆಸನ ಭರ್ತಿ ಪ್ರಮಾಣ ಸರಾಸರಿ ಶೇ.93ರಷ್ಟಿದೆ. 
ಸ್ಪೈಸ್ ಜೆಟ್‍ನಲ್ಲಿ ಆಸನಭರ್ತಿ ಹೆಚ್ಚಾಗಿದ್ದರೂ ಮಾರುಕಟ್ಟೆ ಪಾಲು ಶೇ.12.8ರಷ್ಟು ಪಡೆದಿದೆ. ಏರ್ ಇಂಡಿಯಾದಲ್ಲಿ 10.88 ಲಕ್ಷ, ಜೆಟ್‍ಏರ್ ವೇಸ್ ಮತ್ತು ಜೆಟ್‍ಲೈಟ್‍ನಲ್ಲಿ 14.94 ಲಕ್ಷ, ಗೋ ಏರ್‍ನಲ್ಲಿ 5.94 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಅಕ್ಟೋಬರ್ ತಿಂಗಳು ಹಬ್ಬದ ಸೀಸನ್ ಆಗಿದ್ದರಿಂದ ಹೆಚ್ಚಿನ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಇದು ದೇಶೀಯ ವಿಮಾನಯಾನ ಕಂಪನಿಗಳಿಗೆ ಉತ್ತೇಜನ ತುಂಬಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com