ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಐಸಿಸ್ ನಿರ್ನಾಮಕ್ಕೆ ಪಣ ತೊಟ್ಟ ಜಗತ್ತು: ಭಯೋತ್ಪಾದಕ ಸಂಘಟನೆ ವಿರುದ್ಧ ಸಮರ

ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಒಂದಾಗಿ ಐಸಿಸ್ ಸಂಘಟನೆಯನ್ನು ಬುಡಮಟ್ಟದಿಂದ ಕಿತ್ತೊಗೆಯಲು ಹೆಚ್ಚಿನ ಶಕ್ತಿ ಮತ್ತು ಸಮನ್ವಯತೆಯಿಂದ ಕೆಲಸ ಮಾಡಲಿವೆ. ...
Published on

ಪ್ರಪಂಚಾದ್ಯಂತ ವಿಷ ಬಳ್ಳಿಯಂತೆ ಹಬ್ಬುತ್ತಾ, ಹಿಂಸಾಚಾರವನ್ನೆಸಗಿ ಅಮಾಯಕರ  ಪ್ರಾಣಹರಣ ಮಾಡುತ್ತಿರುವ ಐಸಿಸ್ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಇಡಿ ವಿಶ್ವವೇ ಸಜ್ಜಾಗಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಐಎಸ್​ಐಎಸ್ ಸಂಘಟನೆ ವಿರುದ್ಧ ಇಡಿ ವಿಶ್ವವೇ ಒಂದಾಗಿ ಯುದ್ಧ ಮಾಡುವ ಮೂಲಕ ವಿಶ್ವಕಂಟಕಪ್ರಾಯ ಸಂಘಟನೆಯನ್ನು ತೊಡೆದುಹಾಕುವ ಅಭೂತಪೂರ್ವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಈ ನಿರ್ಣಯದ ಪ್ರಕಾರ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಒಂದಾಗಿ ಐಸಿಸ್ ಸಂಘಟನೆಯನ್ನು ಬುಡಮಟ್ಟದಿಂದ ಕಿತ್ತೊಗೆಯಲು ಹೆಚ್ಚಿನ ಶಕ್ತಿ ಮತ್ತು ಸಮನ್ವಯತೆಯಿಂದ ಕೆಲಸ ಮಾಡಲಿವೆ. ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆದಿರುವ ರಷ್ಯಾ ಮತ್ತು ಚೀನಾ ಐಸಿಸ್ ಸಂಘಟನೆ ನಿರ್ಮೂಲನಕ್ಕಾಗಿ ಪಟ್ಟು ಹಿಡಿದು ವಿಶ್ವ ಸಂಸ್ಥೆ ಮೇಲೆ ಒತ್ತಡ ಹೇರುತ್ತಿವೆ.

ವಿಶ್ವಸಂಸ್ಥೆಯಲ್ಲಿನ ಫ್ರಾನ್ಸ್ ರಾಯಭಾರಿ ಫ್ರಾಂಕೋಯಿಸ್ ಡೆಲಟ್ರೆ ಅವರು ಐಸಿಸ್ ಸಂಘಟನೆಯನ್ನು ತೊಡೆದುಹಾಕಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಾಗುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಕೋರುವ ಫ್ರಾನ್ಸ್ ಸರ್ಕಾರದ ಮನವಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಿದ್ದರು. ಫ್ರಾನ್ಸ್ ಮನವಿ ಸಲ್ಲಿಕೆಯಾಗಿ 24 ಗಂಟೆಗಳು ಕಳೆಯುವುದರೊಳಗಾಗಿ ವಿಶ್ವಸಂಸ್ಥೆ ಈ ನಿರ್ಣಯವನ್ನು ಅಂಗೀಕರಿಸಿತು. ಯಾವುದೇ ವಿಷಯದಲ್ಲಿ ವಿಶ್ವಸಂಸ್ಥೆ ಇಷ್ಟು ತ್ವರಿತವಾಗಿ ಸ್ಪಂದಿಸಿದ ಮೊದಲ ಉದಾಹರಣೆ ಇದಾಗಿದೆ.

ವಿಶ್ವಸಂಸ್ಥೆಯ ನಿರ್ಣಯಗಳನ್ನು ತಿರಸ್ಕರಿಸುವ ವೀಟೋ ಅಧಿಕಾರವನ್ನು ಹೊಂದಿರುವ ರಷ್ಯಾ ಮತ್ತು ಚೀನಾಗಳಿಂದ ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗುವ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ ಇತ್ತೀಚೆಗಷ್ಟೇ ಐಸಿಸ್ ಉಗ್ರರು ಸಿನ್ಹಾಯಿ ಬಳಿ ರಷ್ಯಾದ ವಿಮಾನವೊಂದನ್ನು ಹೊಡೆದುರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಐಸಿಸ್ ಉಗ್ರ ಸಂಘಟನೆಯನ್ನು ತೊಡೆದುಹಾಕಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಾಗಬೇಕೆಂಬ ನಿರ್ಣಯಕ್ಕೆ ರಷ್ಯಾದಿಂದ ಬೆಂಬಲ ದೊರೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com