ಕೌಲಾಲಂಪುರ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಮಲೇಷ್ಯಾದ ರಾಜಧಾನಿಯಲ್ಲಿ ಭಾನುವಾರ ಅಸಿಯನ್ ರಾಷ್ಟ್ರಗಳ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹಣ ಮೂಲವನ್ನು ಭಂಗಗೊಳಿಸುವುದಾಗಿಯೂ, ಉಗ್ರ ನಾಯಕತ್ವವನ್ನು ಸದೆಬಡಿಯುವುದಾಗಿಯೂ ಸಂಕಲ್ಪ ತೊಟ್ಟಿದ್ದಾರೆ.
ಭಯೋತ್ಪಾದನೆಯನ್ನು ಒಂದು ಸ್ವಾಭಾವಿಕ ಸ್ಥಿತಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಐಸಿಸ್ ವಿರುದ್ಧ ಹೋರಾಡುವ ನಮ್ಮ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಒಬಾಮ ಹೇಳಿದ್ದಾರೆ.
ಯಾವುದೇ ಧರ್ಮಭೇದವಿಲ್ಲದೇ ಎಲ್ಲ ಜನರ ಹಕ್ಕಿನ ಪರ ತಾವು ನಿಲ್ಲುವುದಾಗಿ ಹೇಳಿಕೊಂಡ ಬರಾಕ್ ಒಬಾಮ, ಸಿರಿಯಾದ ನಾಯಕ ಬಷರ್ ಅಲ್-ಅಸ್ಸಾದ್'ರ ರಕ್ಷಣೆ ಮಾಡುವ ಉದ್ದೇಶ ತಮಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.