ಯುದ್ಧಾಪರಾಧ ಸಾಬೀತು ಹಿನ್ನೆಲೆ ಬಾಂಗ್ಲಾದಲ್ಲಿ ಇಬ್ಬರು ನಾಯಕರಿಗೆ ಗಲ್ಲು ಶಿಕ್ಷೆ ಜಾರಿ

1971 ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯ ವೇಳೆ ಯುದ್ಧಾಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಬಾಂಗ್ಲಾ ರಾಜಕೀಯ ಮುಖಂಡರನ್ನು ಗಲ್ಲಿಗೇರಿಸಲಾಗಿದೆ.
ಯುದ್ಧಾಪರಾಧ ಸಾಬೀತು ಹಿನ್ನೆಲೆ ಬಾಂಗ್ಲಾದಲ್ಲಿ ಇಬ್ಬರು ನಾಯಕರಿಗೆ ಗಲ್ಲು ಶಿಕ್ಷೆ ಜಾರಿ
ಯುದ್ಧಾಪರಾಧ ಸಾಬೀತು ಹಿನ್ನೆಲೆ ಬಾಂಗ್ಲಾದಲ್ಲಿ ಇಬ್ಬರು ನಾಯಕರಿಗೆ ಗಲ್ಲು ಶಿಕ್ಷೆ ಜಾರಿ

ಢಾಕಾ: 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯ ವೇಳೆ ಯುದ್ಧಾಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಬಾಂಗ್ಲಾ ರಾಜಕೀಯ ಮುಖಂಡರನ್ನು ಗಲ್ಲಿಗೇರಿಸಲಾಗಿದೆ.
ಬಾಂಗ್ಲಾ ವಿಮೋಚನೆ ವೇಳೆ ಪಾಕಿಸ್ತಾನ ಸೇನೆಯೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ, ಅಪರಾಧ ನಡೆಸಿರುವುದು ಬಾಂಗ್ಲಾ ಯುದ್ಧಾಪರಾಧ ನ್ಯಾಯಮಂಡಲಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಬಾಂಗ್ಲಾ ನಾಯಕರನ್ನು ಗಲ್ಲಿಗೇರಿಸಲಾಗಿದೆ.
 ಬಾಂಗ್ಲಾ ದೇಶ ರಾಷ್ಟ್ರೀಯವಾದಿ ಪಕ್ಷದ ನಾಯಕ ಸಲಾಲುದ್ದೀನ್ ಖಾದಿರ್ ಚೌದರಿ, ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ಪಕ್ಷದ ಕಾರ್ಯದರ್ಶಿ ಅಲಿ ಅಹ್ಸನ್ ಮುಹಮ್ಮದ್ ಮೊಜಹೀದ್ ನ.21 ರಂದು ಮಧ್ಯ ರಾತ್ರಿ 12 :55 ಕ್ಕೆ ಗಲ್ಲಿಗೇರಿಸಲಾಗಿದೆ. 
ಇಬ್ಬರೂ ಅಪರಾಧಿಗಳು ಬಾಂಗ್ಲಾ ದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಅಬ್ದುಲ್ ಹಮೀದ್ ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ್ದರು. ಬಾಂಗ್ಲಾದೇಶ ಇಬ್ಬರು ನಾಯಕನನ್ನು ಗಲ್ಲಿಗೇರಿಸಿರುವುದನ್ನು ವಿರೋಧಿಸಿ ಜಮಾತ್-ಇ-ಇಸ್ಲಾಮಿ ಪಕ್ಷ ಸೋಮವಾರ ಪ್ರತಿಭಟನೆಗೆ ಕರೆ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com