
ಬ್ರಸಲ್ಸ್: ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಬೆಲ್ಜಿಯಂ ಪೊಲೀಸರು ೧೬ ಜನರನ್ನು ಬಂಧಿಸಿದ್ದು, ಪ್ಯಾರಿಸ್ ದಾಳಿಯ ಬಂಧೂಕುದಾರಿ ಸಲಾಹ್ ಅಬ್ದೇಸಲಾಮ್ ಅವರು ಇನ್ನೂ ತಲೆಮರಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಸಲ್ಸ್ ಮತ್ತು ಚಾರ್ಲೆರಾಯ್ ನಲ್ಲಿ ಒಟ್ಟು ೨೨ ದಾಳಿಗಳನ್ನು ಭಾನುವಾರ ನಡೆಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ನವೆಂಬರ್ ೧೩ ರಂದು ಭಯೋತ್ಪಾದಕರು ಫ್ರಾನ್ಸ್ ನಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ೧೩೦ ಜನ ಮೃತಪಟ್ಟು ೩೫೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ಶಂಕಿತ ಭಯೋತ್ಪಾದಕರನ್ನು ಸೆರೆಹಿಡಿಯಲು ಪೊಲೀಸರು ಈ ದಾಳಿ ನಡೆಸಿದ್ದಾರೆ,
ಬ್ರಸಲ್ ನಲ್ಲಿ ಭಯೋತ್ಪಾದನೆ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ತಿಳಿಸಿದ್ದು, ವಿಶ್ವವಿದ್ಯಾಲಯಗಳು, ಶಾಲೆಗಳು ಮತ್ತು ಮೆಟ್ರೋವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಅಬ್ದೇಸಲಾಮ್ ನನ್ನು ಹಿಡಿಯಲು ವಾರಾಂತ್ಯದಲ್ಲಿ ಇಡಿ ಬ್ರಸಲ್ ಅನ್ನು ಪೊಲೀಸರು ತಹಬದಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
Advertisement