ಸಿರಿಯಾ ಗಡಿಯಲ್ಲಿ ರಷ್ಯಾದ ಜೆಟ್ ಹೊಡೆದುರುಳಿಸಿದ ಟರ್ಕಿ
ವಿದೇಶ
ಸಿರಿಯಾ ಗಡಿಯಲ್ಲಿ ರಷ್ಯಾದ ಜೆಟ್ ಹೊಡೆದುರುಳಿಸಿದ ಟರ್ಕಿ
ರಷ್ಯಾದ ಎಸ್ ಯು-೨೪ ಯುದ್ಧ ವಿಮಾನವನ್ನು ಟರ್ಕಿಯ ಯುದ್ಧ ವಿಮಾನಗಳು ಮಂಗಳವಾರ ಹೊಡೆದುರುಳಿಸಿವೆ.
ಅಂಕಾರ: ರಷ್ಯಾದ ಎಸ್ ಯು-೨೪ ಯುದ್ಧ ವಿಮಾನವನ್ನು ಟರ್ಕಿಯ ಯುದ್ಧ ವಿಮಾನಗಳು ಮಂಗಳವಾರ ಹೊಡೆದುರುಳಿಸಿವೆ.
ರಷ್ಯಾ ಯುದ್ಧ ವಿಮಾನ ಸಿರಿಯಾ ಗಡಿಯಲ್ಲಿ ಟರ್ಕಿಯ ವಾಯುಗಡಿಯನ್ನು ಉಲ್ಲಂಘಿಸಿದ್ದರಿಂದ ಇದು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಸಿರಿಯಾದ ಗಡಿಯಲ್ಲಿನ ಲಟಕಾಯಿಯ ಯಮಾಡೀ ಗ್ರಾಮದಲ್ಲಿ ಈ ಯುದ್ಧವಿಮಾನ ಪತನಗೊಂಡಿದೆ ಎಂದು ಹುರಿಯತ್ ನ್ಯೂಸ್ ವರದಿ ಮಾಡಿದೆ.
ವಿಮಾನದ ಇಬ್ಬರು ಪೈಲಟ್ ಗಳು ಪ್ಯಾರಚ್ಯೂಟ್ ಮೂಲಕ ಕೆಳಗಿದ್ದಿದ್ದು ಕಂಡುಬಂತು ಎಂದು ಕೂಡ ವರದಿಯಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಬ್ಬ ಪೈಲಟ್ ನನ್ನು ಟರ್ಕಿಯ ಸೇನೆ ಸೆರೆಹಿಡಿದಿದ್ದು, ಮತ್ತೊಬ್ಬ ಪೈಲಟ್ ನ ಶೋಧಕಾರ್ಯ ಜಾರಿಯಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ