
ಅಂಕಾರಾ: ಗಡಿ ಭಾಗಗಳನ್ನು ಕಾಪಾಡಿಕೊಳ್ಳುವ ಟರ್ಕಿಯ ಹಕ್ಕನ್ನು ಎಲ್ಲರೂ ಗೌರವಿಸಬೇಕು ಎಂದು ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್ ಹೇಳಿದ್ದಾರೆ.
ರಷ್ಯಾದ ಕ್ಷಿಪಣಿಯನ್ನು ಹೊಡೆದುರುಳಿಸಿರುವುದರ ಬಗ್ಗೆ ಮಾತನಾಡಿರುವ ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್, ನೆರೆ ರಾಷ್ಟ್ರಗಳೊಂದಿಗೆ ಟರ್ಕಿ ವಿವಾದ ಹೊಂದಿಲ್ಲ. ಇತ್ತೀಚೆಗಿನ ಘಟನೆಯನ್ನು ತಡೆಗಟ್ಟಲು ಯತ್ನಿಸಲಾಯಿತು. ಆದರೆ ಜಾಗತಿಕ ಮಟ್ಟದಲ್ಲಿ ಒಪ್ಪಿತವಾದ ಕಾರ್ಯತತ್ಪರತೆಯ ನಿಯಮಗಳ ಪ್ರಕಾರವೇ ಟರ್ಕಿ ಗಡಿ ಭಾಗದಲ್ಲಿ ಕಂಡುಬಂದ ಅಪರಿಚಿತರ(ಗುರುತಿಲ್ಲದ) ಕ್ಷಿಪಣಿಯನ್ನು ಟರ್ಕಿ ಎಫ್-16 ಜೆಟ್ ಮೂಲಕ ಹೊಡೆದುರುಳಿಸಲಾಯಿತು ಎಂದು ರೆಸಿಪ್ ಎರ್ಡೋಗನ್ ಹೇಳಿದ್ದಾರೆ.
ಎಫ್-16 ಜೆಟ್ ದಾಳಿಗೂ ಮುನ್ನ 10 ಎಚ್ಚರಿಕೆ ನೀಡಲಾಗಿತ್ತು. ಆದರೆ ಅಪರಿಚಿತ ಕ್ಷಿಪಣಿ ಟರ್ಕಿ ವಾಯುಪ್ರದೇಶದಲ್ಲೇ ಹಾರಾಟ ಮುಂದುವರೆಸಿದ್ದರಿಂದ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಸಿರಿಯಾದಲ್ಲಿ ರಷ್ಯಾ ನಡೆಸುತ್ತಿರುವ ದಾಳಿ ಬಗ್ಗೆ ಎರ್ಡೋಗನ್ ನೇರವಾಗಿ ಪ್ರಸ್ತಾಪಿಸದೇ ಇದ್ದರೂ ಬಯಿರ್ಬುಕಕ್ ಟರ್ಕ್ ಮನ್ ಗುಂಪುಗಳ ಮೇಲೆ ಮಾಸ್ಕೋ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
Advertisement