2015 ಆಗಲಿದೆ ಗರಿಷ್ಠ ತಾಪ ವರ್ಷ: ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

2015 ಇದುವರೆಗಿನ ಅತ್ಯಂತ ಗರಿಷ್ಠ ತಾಪಮಾನದ ವರ್ಷವೆಂಬ ದಾಖಲೆಗೆ ಭಾಜನವಾಗಲಿದೆ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಿನೀವಾ: 2015 ಇದುವರೆಗಿನ ಅತ್ಯಂತ ಗರಿಷ್ಠ ತಾಪಮಾನದ ವರ್ಷವೆಂಬ ದಾಖಲೆಗೆ ಭಾಜನವಾಗಲಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ಬುಧವಾರದಂದು ಹೇಳಿಕೆ ನೀಡಿದೆ. ಮುಂದಿ ನವಾರ ಪ್ಯಾರಿಸ್‍ನಲ್ಲಿ ನಡೆಯಲಿರುವ ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಮುನ್ನ ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ. 
``ಮಾಪನ ಆರಂಭಿಸಿದಾಗಿನಿಂದ ನೋಡಿದರೆ ಈ ವರ್ಷದ ಸಮುದ್ರದ ಮೇಲ್ಮೈ ತಾಪಮಾನ ಅತಿ ಹೆಚ್ಚು. ಆದ್ದರಿಂದ ಈ ವರ್ಷ ಭೂಮಿ ದಾಖಲೆಯ ಸರಾಸರಿ ಗರಿಷ್ಠ ಉಷ್ಣಾಂಶ ದಾಖಲಿಸಲಿದೆ. ಇದು ಭೂಗ್ರಹಕ್ಕೊಂದು ಅಶುಭ ಸುದ್ದಿ''ಎಂದು ವಿಶ್ವ ಹವಾಮಾನ ಸಂಸ್ಥೆಯ ಮುಖ್ಯಸ್ಥ ಮೈಕೆಲ್ ಜರಾಡ್ ತಿಳಿಸಿದ್ದಾರೆ. 
ಸಾಮಾನ್ಯವಾಗಿ ವರ್ಷ ಪೂರೈಸುವ ತನಕ ಈ ವರದಿ ಬಹಿರಂಗ ಪಡಿಸದ ವಿಶ್ವಸಂಸ್ಥೆ, ಈ ಬಾರಿ ಕಳೆದ ಹತ್ತು ತಿಂಗಳ ಮಾಹಿತಿ ಆಧರಿಸಿ ಡಿಸೆಂಬರ್ ಅಂತ್ಯಕ್ಕೆ ಮೊದಲೇ ವರದಿಯನ್ನು ಬಹಿರಂಗಪಡಿಸಿದೆ.ಗ್ರೀನ್ ಹೌಸ್ ಅನಿಲ ಹೊರಸೂಸುವಿಕೆ ಈ ಹವಾಮಾನ ಬದಲಾ ವಣೆಗೆ ಮೂಲ ಕಾರಣವಾಗಿದ್ದು, ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಜರಾಡ್ ಅಭಿಪ್ರಾಯಪಟ್ಟಿದ್ದಾರೆ. 
1993ರಿಂದ ಉಪ ಗ್ರಹಗಳ ಮೂಲಕ ಈ ಮಾಪನ ನಡೆಸಲಾಗುತ್ತಿದ್ದು, ಈ ಬಾರಿಯ ಉಷ್ಣಾಂಶ ಕಳೆದ 22 ವರ್ಷಗಳಲ್ಲಿ ಗರಿಷ್ಠ ಎನ್ನಲಾಗಿದೆ. ಚೀನಾ ಅತಿ ಬಿಸಿ ಪ್ರದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರೆ, ಆಫ್ರಿಕಾಗೆ ದ್ವಿತೀಯ ಸ್ಥಾನ. ಮಿಕ್ಕಂತೆ ಭಾರತ, ಪಾಕ್, ಯೂರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ದೇಶಗಳಿಗೂ ಭೀಕರ ಬಿಸಿ ತಟ್ಟಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com