ಪ್ಯಾರಿಸ್‌ನಲ್ಲಿ ಮೋದಿ-ಷರೀಫ್ ಭೇಟಿ, ಬದಲಾಗುತ್ತಾ ಭಾರತ-ಪಾಕ್ ಹವಾಮಾನ?

ಇಂದಿನಿಂದ ಆರಂಭವಾಗಿರುವ ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ...
ನವಾಜ್ ಷರೀಪ್ - ನರೇಂದ್ರ ಮೋದಿ
ನವಾಜ್ ಷರೀಪ್ - ನರೇಂದ್ರ ಮೋದಿ

ಪ್ಯಾರಿಸ್: ಇಂದಿನಿಂದ ಆರಂಭವಾಗಿರುವ ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಸೋಮವಾರ ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದರು.

ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಪ್ಯಾರಿಸ್‌ನಲ್ಲಿ ಪಾಕ್ ಪ್ರಧಾನಿಯ ಹಸ್ತಲಾಘವ ಮಾಡಿ, ಒಂದೇ ಸೋಫಾದಲ್ಲಿ ಕುಳಿತು ಚರ್ಚಿಸುತ್ತಿರುವ ದೃಶ್ಯಗಳು ಮಾಧ್ಯಮಕ್ಕೆ ಲಭ್ಯವಾಗಿವೆ. ಆದರೆ ಉಭಯ ನಾಯಕರ ಮಾತುಕತೆಯ ವಿವರ ಇನ್ನೂ ಲಭ್ಯವಾಗಿಲ್ಲ.

ಪ್ಯಾರಿಸ್‌ನಲ್ಲಿ ಮೋದಿ ಹಾಗೂ ನವಾಜ್ ಷರೀಫ್ ಅವರ ಅಧಿಕೃತ ಮಾತುಕತೆ ಇದುವರೆಗೂ ನಿಗದಿಯಾಗಿಲ್ಲ. ಆದರೆ ಇತ್ತೀಚಿಗಷ್ಟೇ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಭಾರತದೊಂದಿಗೆ ಬೇಷರತ್ ಮಾತುಕತೆಗೆ ಸಿದ್ಧ ಎಂದು ಹೇಳಿರುವುದರಿಂದ ದ್ವಿಪಕ್ಷೀಯ ಮಾತುಕತೆ ತಳ್ಳಿಹಾಕುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com