
ನ್ಯೂಯಾರ್ಕ್:ಇತ್ತೀಚೆಗಷ್ಟೇ ಟ್ವಿಟರ್ ಗೆ ಸೇರ್ಪಡೆಗೊಂಡ ಎಡ್ವರ್ಡ್ ಸ್ನೋಡೆನ್ ಅವರಿಗೆ ಬರೋಬ್ಬರಿ 47 ಜಿಬಿ cಬಂದಿದೆ.
ಅಮೆರಿಕಾದ ರಾಷ್ಟ್ರೀಯ ಭದ್ರತಾ ಏಜೆನ್ಸಿಯ(ಎನ್ ಎಸ್ ಎ) ಜೊತೆಗೆ ಇದ್ದು ನಂತರ ಆ ಸಂಸ್ಥೆ ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದ ಎಡ್ವರ್ಡ್ ಸ್ನೋಡೆನ್ ಟ್ವಿಟರ್ ಖಾತೆ ತೆರೆದ ಮೇಲೆ ನೊಟಿಫಿಕೇಶನ್ ಸೇಟ್ಟಿಂಗ್ ಬದಲಾವಣೆ ಮಾಡದೇ ಇದ್ದರಿಂದ ಟ್ವೀಟ್ ಖಾತೆ ತೆರೆದ ಕೆಲವೇ ದಿನಗಳಲ್ಲಿ 47 ಜಿಬಿ ನೊಟಿಫಿಕೇಶನ್ ಬಂದಿದೆ.
ಎಡ್ವರ್ಡ್ ಸ್ನೊಡೆನ್ ಟ್ವಿಟರ್ ಖಾತೆ ತೆರೆದ 27 ಗಂಟೆಗಳಲ್ಲಿ 1 .19 ಮಿಲಿಯನ್ ಅನುಯಾಯಿಗಳಿದ್ದಾರೆ. ನೊಟಿಫಿಕೇಶನ್ ಬಂದಿರುವ ಬಗ್ಗೆ ಟ್ವೀಟ್ ಮಾಡಿರುವ ಎಡ್ವರ್ಡ್ ಸ್ನೋಡೆನ್, ನೊಟಿಫಿಕೇಶನ್ ಗಳನ್ನು ಟರ್ನ್ ಆಫ್ ಮಾಡುವುದನ್ನು ಮರೆತಿದ್ದೆ. ಟ್ವಿಟರ್ ಪ್ರತಿಯೊಂದಕ್ಕೂ ಇ-ಮೇಲ್ ಬಂದಿದೆ ಎಂದು ಹೇಳಿದ್ದಾರೆ.
Advertisement