ಗ್ವಾಟೆಮಾಲದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 29 ಕ್ಕೆ ಏರಿಕೆ, 600 ಜನ ನಾಪತ್ತೆ

ಮೆಕ್ಸಿಕೋದ ದಕ್ಷಿಣ ಭಾಗದಲ್ಲಿರುವ ಗ್ವಾಟೆಮಾಲಾದಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ 125 ಮನೆಗಳು ನಾಶವಾಗಿದ್ದು 29 ಜನ ಸಾವನ್ನಪ್ಪಿದ್ದರೆ 600 ಜನರು ನಾಪತ್ತೆಯಾಗಿದ್ದಾರೆ.
ಗ್ವಾಟೆಮಾಲಾ
ಗ್ವಾಟೆಮಾಲಾ

ಗ್ವಾಟೆಮಾಲ ಸಿಟಿ: ಮೆಕ್ಸಿಕೋದ ದಕ್ಷಿಣ ಭಾಗದಲ್ಲಿರುವ ಗ್ವಾಟೆಮಾಲಾದಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ 125 ಮನೆಗಳು ನಾಶವಾಗಿದ್ದು 29 ಜನ ಸಾವನ್ನಪ್ಪಿದ್ದರೆ 600 ಜನರು ನಾಪತ್ತೆಯಾಗಿದ್ದಾರೆ.
ಈ ವರೆಗೆ 29 ಜನರು ಸಾವನ್ನಪ್ಪಿದ್ದಾರೆ, ತೀವ್ರವಾಗಿ ಗಾಯಗೊಂಡಿರುವ ಒಬ್ಬ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಗ್ವಾಟೆಮಾಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಅಧಿಕಾರಿ ಸೆರ್ಗಿಯೋ ಕಬಾನಸ್ ಹೇಳಿದ್ದಾರೆ.
ಭೂಕುಸಿತದಿಂದಾಗಿ ಮನೆಗಳಿಗೆ ತೀವ್ರ ಹಾನಿಯಾಗಿರುವುದರಿಂದ 600 ಜನರು ಈ ವರೆಗೂ ನಾಪತ್ತೆಯಾಗಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗುರುವಾರ ರಾತ್ರಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಗ್ವಾಟೆಮಾಲಾದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಲ್ಲಿ ಸಿಲಿಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು, 36 ಜನರನ್ನು ರಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com