ಬಾಂಗ್ಲಾದಲ್ಲಿ ಜಪಾನ್ ಪ್ರಜೆಯ ಹತ್ಯೆ

ಬಾಂಗ್ಲಾ ದೇಶದಲ್ಲಿ ಮತ್ತೋರ್ವ ವಿದೇಶಿ ನಾಗರಿಕನನ್ನು ಹತ್ಯೆ ಮಾಡಲಾಗಿದೆ.
ಬಾಂಗ್ಲಾ ದೇಶ
ಬಾಂಗ್ಲಾ ದೇಶ
Updated on

ಢಾಕಾ: ಬಾಂಗ್ಲಾ ದೇಶದಲ್ಲಿ ಮತ್ತೋರ್ವ ವಿದೇಶಿ ನಾಗರಿಕನನ್ನು ಹತ್ಯೆ ಮಾಡಲಾಗಿದೆ.
ರಾಜಧಾನಿ ಢಾಕಾದಲ್ಲಿ ಇಟಾಲಿಯ ಮಹಿಳೆಯನ್ನು ಹತ್ಯೆ ಮಾಡಿದ ಪ್ರಕರಣ ನಡೆದ ಒಂದು ವಾರದಲ್ಲೇ ಜಪಾನ್ ದೇಶದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾಗಿರುವ ವ್ಯಕ್ತಿಯನ್ನು ಓಸಿಕೊನಿಯೊ(55 ) ಎಂದು ಗುರುತಿಸಲಾಗಿದೆ.
ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ, ಹತ್ಯೆ ಹಿಂದಿರುವ ಉದ್ದೇಶ ಈ ವೆರೆಗೂ ತಿಳಿದಿಲ್ಲ ಎಂದು ರೆಜೌಲ್ ಕರೀಂ ಹೇಳಿದ್ದಾರೆ.  ಇದಕ್ಕೂ ಮುನ್ನ ನೆದರ್ ಲ್ಯಾಂಡ್ ನ ಮೂಲದ ಎನ್.ಜಿ.ಒ ಅಧಿಕಾರಿಯೊಬ್ಬರನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com