ಜ್ಯೂರಿಚ್: ಕಪ್ಪು ಹಣ ಜಮೆಮಾಡಿರುವ ಭಾರತೀಯರ ಮತ್ತು ವಿದೇಶಿಯರ ಬ್ಯಾಂಕ್ ಖಾತೆಗಳ ವಿವರಗಳ ಮೊದಲ ಪಟ್ಟಿಯನ್ನು ಇದೇ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿರುವುದಾಗಿ ಸ್ವಿಜರ್ ಲೆಂಡ್ ಘೋಷಿಸಿದೆ.
ಈಗ ಬಿಡುಗಡೆ ಮಾಡಲಿರುವ ಪಟ್ಟಿಯಲ್ಲಿರುವ ಖಾತೆಗಳಲ್ಲಿ ಕಳೆದ 60 ವರ್ಷಗಳಿಂದ ವರ್ಷಗಳಿಂದ ಯಾವ ವಾರಸುದಾರನಿಂದಲೂ ವಹಿವಾಟು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಪ್ಪುಹಣಗಳನ್ನು ಇಡಲೆಂದೇ ಇರುವ ಬ್ಯಾಂಕ್‍ಗಳೆಂಬ ಕುಖ್ಯಾತಿ ಗಳಿಸಿರುವ ಸ್ವಿಜರ್‍ಲೆಂಡ್ ಬ್ಯಾಂಕ್‍ಗಳು ಇದೇ ಮೊದಲ ಬಾರಿಗೆ ಹೀಗೊಂದು ಪಟ್ಟಿ ಬಿಡುಗಡೆ ಮಾಡಲು ಹೊರಟಿರುವುದು ಎಲ್ಲರ ಕುತೂಹಲ ಕೆರಳಿಸಿದ್ದು, ಎಲ್ಲ ಬ್ಯಾಂಕ್‍ಗಳಿಂದ ವಿವರ ಪಡೆದ ನಂತರ ಬ್ಯಾಂಕಿಂಗ್ ಓಂಬುಡ್ಸ್ ಮನ್ ಈ ಪಟ್ಟಿ ಬಿಡುಗಡೆ ಮಾಡಲಿದ್ದಾರೆಂದು ತಿಳಿದು ಬಂದಿದೆ.