ಭಾರತ ಪ್ರವಾಸದಲ್ಲಿರುವ ಜರ್ಮನಿ ಚಾನ್ಸೆಲರ್ ಮಾರ್ಕೆಲ್‌ಗೆ ಸಾಂಪ್ರದಾಯಿಕ ಸ್ವಾಗತ

ಭಾರತ ಪ್ರವಾಸದ ಉದ್ದೇಶದಿಂದ ಭಾನುವಾರ ನವದೆಹಲಿ ಆಗಮಿಸಿದ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರಿಗೆ...
ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್- ಪ್ರಧಾನಿ ನರೇಂದ್ರ ಮೋದಿ
ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್- ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಭಾರತ ಪ್ರವಾಸದ ಉದ್ದೇಶದಿಂದ ಭಾನುವಾರ ನವದೆಹಲಿ ಆಗಮಿಸಿದ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರಿಗೆ ಇಂದು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. 
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನಾ ಸಾಂಪ್ರದಾಯಿಕವಾಗಿ ಅವರನ್ನು ಸ್ವಾಗತಿಸಲಾಗಿದ್ದು, ಮಾರ್ಕೆಲ್ ಅವರು ಎರಡು ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ತಂತ್ರಜ್ಞಾನ, ನೈಪುಣ್ಯತೆ ಅಭಿವೃದ್ಧಿ, ನದಿ ಸ್ವಚ್ಛತೆ, ಸ್ವಚ್ಛ ಇಂಧನ, ತ್ಯಾಜ್ಯ ನಿರ್ವಹಣೆ ಮತ್ತು ರೈಲ್ವೆ ಸುಧಾರಣೆಗಳ ಕುರಿತಂತೆ ಕೆಲವು ಮಹತ್ವದ ಮಾತುಕತೆಗಳು ಏಂಜೆಲಾ ಮಾರ್ಕೆಲ್ ಜೊತೆ ಪ್ರಧಾನಿ ಮೋದಿ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
ಮಾರ್ಕೆಲ್  ಅವರು ಭಾರತಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, “ಚಾನ್ಸಲರ್ ಮಾರ್ಕೆಲ್ ಅವರೇ ನಮಸ್ತೆ...! ನಿಮಗೂ ಹಾಗೂ ನಿಮ್ಮ ನಿಯೋಗಕ್ಕೆ ಆತ್ಮೀಯ ಸ್ವಾಗತ. ಈ ಭಾರಿ ಭೇಟಿಯ ವೇಳೆ ಫಲಪ್ರದ ಮಾತುಕತೆ ನಡೆಯುತ್ತದೆ ಮತ್ತು ಭಾರತ ಮತ್ತು ಜರ್ಮನಿ ನಡುವಿನ ಸಂಬಂಧ ವೃದ್ಧಿಯಾಗುವುದಾಗಿ ನಾನು ಭಾವಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com