ನವದೆಹಲಿ: ಕಳೆದ ತಿಂಗಳು ಮೆಕ್ಕಾದಲ್ಲಿ ಹಜ್ ಯಾತ್ರೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಭಾರತೀಯ ಯಾತ್ರಿಗಳ ಸಂಖ್ಯೆ 58ಕ್ಕೇರಿದೆ. ಇನ್ನೂ 78 ಮಂದಿ ಭಾರತೀಯರ ಸುಳಿವೇ ಸಿಕ್ಕಿಲ್ಲ.
ಹೀಗೆಂದು ವಿದೇಶಾಂಗ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ``ನಾವು 58 ಭಾರತೀಯರನ್ನು ಕಳೆದುಕೊಂಡಿದ್ದೇವೆ. ಇನ್ನೂ 78 ಮಂದಿ ನಾಪತ್ತೆಯಾಗಿದ್ದಾರೆ.
ಭಾರತೀಯರ ಪತ್ತೆಗಾಗಿ ಎಲ್ಲ ಪ್ರಯತ್ನಗಳು ಮುಂದುವರಿದಿವೆ'' ಎಂದಿದ್ದಾರೆ. ಇದೇ ವೇಳೆ, ಹಜ್ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ 769 ಮತ್ತು ಗಾಯಾಳುಗಳು 934 ಮಂದಿ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.