ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಮೂರು ಡಾಕ್ಟರೇಟ್ ಪ್ರದಾನ

ಮುಂದಿನ ವಾರ ಪಶ್ಚಿಮ ಏಷ್ಯಾ ಪ್ರವಾಸ ಕೈಗೊಳ್ಳಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಲ್ಲಿನ ಮೂರು ಪ್ರಮುಖ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಲಿವೆ.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ಜೆರುಸಲೆಮ್: ಮುಂದಿನ ವಾರ ಪಶ್ಚಿಮ ಏಷ್ಯಾ ಪ್ರವಾಸ ಕೈಗೊಳ್ಳಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಲ್ಲಿನ ಮೂರು ಪ್ರಮುಖ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಲಿವೆ.
ಜೋರ್ಡಾನ್, ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ಮತ್ತು ಇಸ್ರೇಲ್ ನ ವಿಶ್ವವಿದ್ಯಾನಿಲಯಗಳು ಪ್ರಣಬ್ ಮುಖರ್ಜಿ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಿವೆ. ಜೋರ್ಡಾನ್ ನ ವಿಶ್ವವಿದ್ಯಾನಿಲಯ ಪ್ರಣಬ್ ಮುಖರ್ಜಿ ಅವರಿಗೆ ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್  ನೀಡಲು ನಿರ್ಧರಿಸಿದೆ.
ಭಾರತದ ರಾಷ್ಟ್ರಪತಿಗಳಿಗೆ ಗೌರವ ಡಾಕ್ಟರೇಟ್ ನೀಡುವುದು ಹೆಮ್ಮೆಯ ವಿಷಯ ಎಂದು ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಅಲ್-ಕುದ್ಸ್ ವಿಶ್ವವಿದ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಪ್ಯಾಲೆಸ್ಟೀನಿಯಾ ಭಾರತದಿಂದ ಹೆಚ್ಚಿನ ನೆರವು ಪಡೆಯುತ್ತಿದ್ದು ಪ್ಯಾಲೆಸ್ಟೀನಿಯಾದೊಂದಿಗೆ ಭಾರತ ಶೈಕ್ಷಣಿಕ ಸಹಕಾರ ವಿಚಾರದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದೆ.
ಜೆರುಸಲೆಮ್ ನ ಹೀಬ್ರೂ ವಿಶ್ವವಿದ್ಯಾನಿಲಯ ಸಹ ಪ್ರಣಬ್ ಮುಖರ್ಜಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ರಾಷ್ಟ್ರಪತಿಗಳೊಂದಿಗೆ ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com