ಟರ್ಕಿ ಅವಳಿ ಬಾಂಬ್ ಸ್ಫೋಟ: ಸಾವಿನ ಸಂಖ್ಯೆ 95ಕ್ಕೆ ಏರಿಕೆ

ಕುರ್ದೀಶ್ ರೆಬೆಲ್ಸ್ ಹಾಗೂ ಟರ್ಕಿಶ್ ಭದ್ರತಾ ಸಿಬ್ಬಂದಿಗಳ ನಡುವಿನ ಹಿಂಸಾಚಾರ ವಿರೋಧಿಸಿ ಟರ್ಕಿಶ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಸಂಭವಿಸಿದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 95ಕ್ಕೆ ಏರಿರುವುದಾಗಿ ಭಾನುವಾರ ವರದಿಗಳಿಂದ ತಿಳಿದುಬಂದಿದೆ...
ಬಾಂಬ್ ಸ್ಪೋಟದ ವೇಳೆ ಗಾಯಗೊಂಡ ವ್ಯಕ್ತಿಯನ್ನು ಸ್ಥಳಾಂತರಿಸುತ್ತಿರುವ ಭದ್ರತಾ ಸಿಬ್ಬಂದಿಗಳು
ಬಾಂಬ್ ಸ್ಪೋಟದ ವೇಳೆ ಗಾಯಗೊಂಡ ವ್ಯಕ್ತಿಯನ್ನು ಸ್ಥಳಾಂತರಿಸುತ್ತಿರುವ ಭದ್ರತಾ ಸಿಬ್ಬಂದಿಗಳು

ಅಂಕಾರಾ: ಕುರ್ದೀಶ್ ರೆಬೆಲ್ಸ್ ಹಾಗೂ ಟರ್ಕಿಶ್ ಭದ್ರತಾ ಸಿಬ್ಬಂದಿಗಳ ನಡುವಿನ ಹಿಂಸಾಚಾರ ವಿರೋಧಿಸಿ ಟರ್ಕಿಶ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಸಂಭವಿಸಿದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 95ಕ್ಕೆ ಏರಿರುವುದಾಗಿ ಶನಿವಾರ ವರದಿಗಳಿಂದ ತಿಳಿದುಬಂದಿದೆ.

ಟರ್ಕಿಶ್ ರಾಜಧಾನಿಯಾಗಿರುವ ಅಂಕಾರಾದ ರೈಲ್ವೆ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಪೋಟ ಸಂಭವಿಸಿದ್ದು, ಈ ತಿಳಿಸಿದ್ದ ವರದಿಯ ಪ್ರಕಾರ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ 35 ಮಂದಿ ಘಟನೆ ವೇಳೆ ಸಾವನ್ನಪ್ಪಿದ್ದು,  246ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ 48 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಟರ್ಕಿಶ್ ಸರ್ಕಾರ, ಘಟನೆಯೊಂದು ಉಗ್ರರ ದಾಳಿ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ತನಿಖೆ ಮುಂದುವರೆದಿದ್ದು, ಉಗ್ರರು ಆತ್ಮಹತ್ಯಾ ದಾಳಿ ಮಾಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ. ಬಾಂಬ್ ಸ್ಪೋಟ ಪ್ರಕರಣ ಹೊಣೆಗಾರಿಕೆಯನ್ನು ಈವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com