ಟರ್ಕಿಶ್ ನಲ್ಲಿ ಅವಳಿ ಬಾಂಬ್ ಸ್ಫೋಟ 30 ಸಾವು, 126ಕ್ಕೂ ಹೆಚ್ಚು ಗಾಯ

ಟರ್ಕಿಶ್ ರಾಜಧಾನಿಯಾಗಿರುವ ಅಂಕಾರಾದ ರೈಲ್ವೆ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಗೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ...
ಅಂಕಾರಾದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡಿರುವ ಚಿತ್ರ
ಅಂಕಾರಾದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡಿರುವ ಚಿತ್ರ

ಅಂಕಾರಾ: ಟರ್ಕಿಶ್ ರಾಜಧಾನಿಯಾಗಿರುವ ಅಂಕಾರಾದ ರೈಲ್ವೆ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಗೊಂಡಿದ್ದು, 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಕುರ್ದೀಶ್ ರೆಬೆಲ್ಸ್ ಹಾಗೂ ಟರ್ಕಿಶ್ ಭದ್ರತಾ ಸಿಬ್ಬಂದಿಗಳ ನಡುವಿನ ಹಿಂಸಾಚಾರ ವಿರೋಧಿಸಿ ಟರ್ಕಿಶ್ ನ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರು ಪ್ರತಿಭಟನೆಗಿಳಿದಿದ್ದರು. ಈ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಬಾಂಬ್ ಸ್ಪೋಟದಲ್ಲಿ 30 ಮಂದಿ ಸಾವನ್ನಪ್ಪಿದ್ದು, 126ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಟರ್ಕಿಶ್ ಸರ್ಕಾರ, ಘಟನೆಯೊಂದು ಉಗ್ರರ ದಾಳಿ ಎಂಬುದು ತಿಳಿದುಬಂದಿದೆ. ಘಟನೆ ಕುರಿತಂತೆ ತನಿಖೆ ಮುಂದುವರೆದಿದ್ದು, ಉಗ್ರರು ಆತ್ಮಹತ್ಯಾ ದಾಳಿ ಮಾಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ. ಬಾಂಬ್ ಸ್ಪೋಟ ಪ್ರಕರಣ ಹೊಣೆಗಾರಿಕೆಯನ್ನು ಈವರೆಗೂ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com