ಮಾಟಮಂತ್ರ ಆರೋಪ: ಹಿಂದೂ ಮಹಿಳೆಯನ್ನು ವಜಾಗೊಳಿಸಿದ ಅಮೆರಿಕ ವಾಯು ಸೇನೆ

ಹಿಂದೂ ಮಹಿಳೆ ಕಚೇರಿಯಲ್ಲಿ ಮಾಟ ಮಂತ್ರದ ಮೂಲಕ ದೆವ್ವಗಳನ್ನು ಆಹ್ವಾನಿಸುತ್ತಿದ್ದಾಳೆ ಎಂದು ಆರೋಪಿಸಿ ಅಮೆರಿಕದ ವಾಯು...
ಸಾಂದರ್ಭಿಕ ಚಿತ್ರ(ಬಲ ತುದಿಯಲ್ಲಿ-ಡೆಬೊರಾ ಶೊನ್ ಫೆಲ್ಡ್)
ಸಾಂದರ್ಭಿಕ ಚಿತ್ರ(ಬಲ ತುದಿಯಲ್ಲಿ-ಡೆಬೊರಾ ಶೊನ್ ಫೆಲ್ಡ್)
ವಾಷಿಂಗ್ಟನ್: ಹಿಂದೂ ಮಹಿಳೆ ಕಚೇರಿಯಲ್ಲಿ ಮಾಟ ಮಂತ್ರದ ಮೂಲಕ ದೆವ್ವಗಳನ್ನು ಆಹ್ವಾನಿಸುತ್ತಿದ್ದಾಳೆ ಎಂದು ಆರೋಪಿಸಿ ಅಮೆರಿಕದ ವಾಯು ಸೇನೆ ಆಕೆಯನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ವರದಿಯಾಗಿದೆ.
ನಾನು ಹಿಂದೂ ಆಗಿರುವುದರಿಂದ, ಕಚೇರಿಯಲ್ಲಿ ಯೋಗ ಮಾಡುತ್ತೇನೆ ಮತ್ತು ಭಾರತೀಯ ಸಂಗೀತವನ್ನು ಕೇಳುತ್ತೇನೆಂಬ ಕಾರಣಕ್ಕೆ ನಾನು ಮಾಟಮಂತ್ರ ಮಾಡಿ, ದೆವ್ವಗಳನ್ನು ಕಚೇರಿಗೆ ಆಹ್ವಾನಿಸುತ್ತಿರುವುದಾಗಿ ಆಪಾದಿಸಿ ಅಮೆರಿಕ ವಾಯು ಸೇನೆಯು ತನ್ನನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಅಮೆರಿಕ ವಾಯು ಸೇನೆಯಲ್ಲಿ ದಂತ ವೈದ್ಯ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಡೆಬೊರಾ ಶೊನ್ ಫೆಲ್ಡ್ ಆಪಾದಿಸಿದ್ದಾರೆ.
ವರದಿಗಳ ಪ್ರಕಾರ, ಮೇರಿಲ್ಯಾಂಡ್ ನ ಫೋರ್ಟ್ ಮೆಕೆಡ್ ನ ಎಪ್ಸ್ ಡೆಂಟಲ್ ಕ್ಲಿನಿಕ್ ನಲ್ಲಿ ಡೆಬೊರಾ ಶೊನ್ ಫೆಲ್ಡ್ ಸೇವೆ ಸಲ್ಲಿಸುತ್ತಿದ್ದರು. ಆಕೆಯನ್ನು ಸೆ. 2ರಂದು ಸೇವೆಯಿಂದ ವಜಾ ಮಾಡಲಾಗಿದೆ. ಈಕೆ ಕಚೇರಿಯಲ್ಲಿ ಯೋಗ ಮಾಡಿ, ಭಾರತೀಯ ಸಂಗೀತವನ್ನು ಕೇಳುತ್ತಿದ್ದಳು. ಆದರೆ, ಇದನ್ನು ಸರಿಯಾಗಿ ಅರಿಯದ ವಾಯು ಸೇನೆ ತಾನು ಮಾಟಮಂತ್ರ ಮೂಲಕ ದೆವ್ವಗಳನ್ನು ಆಹ್ವಾನಿಸುತ್ತಿದ್ದಾಳೆಂದು ಕಲ್ಪನೆ ಮಾಡಿಕೊಂಡು ಆಕೆಯನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಹೇಳಲಾಗುತ್ತಿದೆ. 
ಇಷ್ಟೇ ಅಲ್ಲದೇ, ತಾನು ಸಹದ್ಯೋಗಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಆದರೆ, ತನ್ನ ವಿರುದ್ಧ ಆಪಾದನೆ ಮಾಡಿರುವ ಸಹದ್ಯೋಗಿ ಯಾರೆಂದು ತಿಳಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. 
ಸೇವಾ ಸ್ಥಳದಲ್ಲಿ ತಮ್ಮ ಮೇಲೆ ಡೆಬೊರಾ ಕಿರುಕುಳ ನೀಡುತ್ತಿದ್ದಳು ಎಂದು ಇಬ್ಬರು ಸಹೋದ್ಯೋಗಿಗಳು ಆರೋಪಿಸಿರುವುದಾಗಿ ಅಲ್ಲಿನ ಕೆಲವು ಸ್ಥಳೀಯ ವರದಿಗಳು ತಿಳಿಸಿವೆ. ಅವರಲ್ಲಿ ಒಬ್ಬ ಸಹೋದ್ಯೋಗಿ, ಡೆಬೊರಾ ‘ಹಿಂದೂ ಮಾಟಗಾತಿ’ ಎಂದು ಆಪಾದಿಸಿರುವುದಾಗಿ ವರದಿ ತಿಳಿಸಿದೆ. ಇದೀಗ ಈ ಆಪಾದನೆ ಬಗ್ಗೆ ಸೇನೆಯ ಧಾರ್ಮಿಕ ಸ್ವಾತಂತ್ರ್ಯ ಪ್ರತಿಷ್ಠಾನ ವಿಚಾರಣೆ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com