ಯುದ್ಧಭೂಮಿಯಿಂದ ಕ್ಯಾಮೆರಾಮೆನ್ ಜತೆ ಹನಾ ಮುಹಮ್ಮದ್

ಇಸ್ರೇಲ್ ಸೈನ್ಯ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುವ ಯುದ್ಧದ ವರದಿಗಾರ್ತಿ ಈಕೆ. ಈಕೆ ಯುದ್ಧಭೂಮಿಯಿಂದ ವರದಿ ಮಾಡುತ್ತಿರಬೇಕಾದರೆ ಹತ್ತಿರದಲ್ಲೇ ಗ್ರೆನೇಡ್ ದಾಳಿ,,,
ಹನಾ ಮಹಮ್ಮದ್ (ಕೃಪೆ: ಟ್ವಿಟರ್ )
ಹನಾ ಮಹಮ್ಮದ್ (ಕೃಪೆ: ಟ್ವಿಟರ್ )
ಜೆರುಸಲೇಂ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ಕೆಲಸ ಮಾಡುವವರಿಗೆ ಪ್ರತಿ ದಿನವೂ ಸವಾಲಿನದ್ದೇ ಆಗಿರುತ್ತದೆ. ಅದರಲ್ಲೂ ಯುದ್ದಭೂಮಿಯಿಂದ ಸುದ್ದಿ ಕಳಿಸಬೇಕಾಗಿ ಬಂದ ಸಂದರ್ಭದಲ್ಲಿ ಜೀವವನ್ನೇ ಪಣಕ್ಕೊಡ್ಡಿ ಸುದ್ದಿ ಕಳಿಸಬೇಕಾಗಿರುತ್ತದೆ. ಈ ರೀತಿ ಯುದ್ಧಭೂಮಿಯಿಂದ ಸುದ್ದಿ ಕಳಿಸುವ ಪತ್ರಕರ್ತೆ ಹನಾ ಮಹಮ್ಮದ್.
ಇಸ್ರೇಲ್ ಸೈನ್ಯ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುವ ಯುದ್ಧದ ವರದಿಗಾರ್ತಿ ಈಕೆ. ಈಕೆ ಯುದ್ಧಭೂಮಿಯಿಂದ ವರದಿ ಮಾಡುತ್ತಿರಬೇಕಾದರೆ ಹತ್ತಿರದಲ್ಲೇ ಗ್ರೆನೇಡ್ ದಾಳಿ ನಡೆಯಿತು. ಇದರಿಂದ ಹನಾಳಿಗೆ ಗಾಯಗಳಾಯಿತು. ಹಾಗಂತ ಹನಾ ಹೆದರಿ ಕೂರಲಿಲ್ಲ. ಮುಖಕ್ಕೆ ಬ್ಯಾಂಡೇಜ್ ಹಾಕಿಕೊಂಡೇ ಯುದ್ಧಭೂಮಿಯಿಂದ ಸುದ್ದಿ ಕಳಿಸಲು ತೊಡಗಿದರು.
ಮುಖಕ್ಕೆ ಬ್ಯಾಂಡೇಜ್ ಹಾಕಿಕೊಂಡು ಯುದ್ಧಭೂಮಿಯಿಂದ ಸುದ್ದಿ ಮಾಡುತ್ತಿರುವ ಹನಾಳ ಫೋಟೋ ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಯುದ್ಧಭೂಮಿಯಿಂದ ವರದಿ ಮಾಡುತ್ತಿರುವ ಹನಾಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪೂರ್ವ ಜೆರುಸಲೇಂನ ಅಲ್ ಮಯ್ದೀನ್ ಟೀವಿ ವರದಿಗಾರ್ತಿಯಾಗಿದ್ದಾಳೆ ಹನಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com