ಸ್ಟಾಕ್ ಹೋಮ್: ಸ್ಕಾಟ್ಲೆಂಡ್ ನ ಅರ್ಥಶಾಸ್ತ್ರಜ್ಞ ಆಂಗಸ್ ಡೀಟನ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ. ಬಳಕೆ, ಬಡತನ ಮತ್ತು ಕಲ್ಯಾಣದ ಕುರಿತು ಅವರ ವಿಶ್ಲೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಎಡಿನ್ ಬರ್ಗ್ ನಲ್ಲಿ 1945ರಲ್ಲಿ ಜನಸಿದ ಡೀಟನ್ ಈಗ ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಕಲಿಸುತ್ತಿದ್ದಾರೆ. ಡೀಟನ್ ರ ಕಾರ್ಯವು ಮುಖ್ಯವಾಗಿ ಮೂರು ಪ್ರಶ್ನೆಗಳ ಸುತ್ತ ವಿಕಸಿಸಿದೆ.
ಬಳಕೆದಾರರು ತಮ್ಮ ವೆಚ್ಚವನ್ನು ವಿಭಿನ್ನ ವಸ್ತುಗಳಲ್ಲಿ ಹಂಚುವ ಬಗೆ ಹೇಗೆ? ಸಮಾಜದ ಆದಾಯದಲ್ಲಿ ಎಷ್ಟು ಖರ್ಚಾಗುತ್ತದೆ ಮತ್ತು ಎಷ್ಟು ಉಳಿತಾಯವಾಗುತ್ತದೆ? ಬಡತನ ಮತ್ತು ಕಲ್ಯಾಣವನ್ನು ನಾವು ಅಳೆಯುವುದು ಮತ್ತು ವಿಶ್ಲೇಷಿಸುವ ಬಗೆ ಹೇಗೆ? ಪ್ರಶಸ್ತಿ ಘೋಷಣೆ ಬಳಿಕ ನೀಡಲಾದ ಪತ್ರಿಕಾ ಸಂದರ್ಶನದಲ್ಲಿ ಡೀಟನ್ ತಮ್ಮನ್ನು ತಾವು ಜಗತ್ತಿನ ಬಡವರು ಜನರ ವರ್ತನೆ ಉತ್ತಮ ಬದುಕಿನ ಬಗ್ಗೆ ಕಾಳಜಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿಕೊಂಡಿದ್ದಾರೆ.