
ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ 9 ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿವರಣೆ ನೀಡುವಂತೆ ಪಾಕಿಸ್ತಾನ ಮಾಜಿ ರಕ್ಷಣಾ ಸಚಿವ ಚೌಧುರಿ ಮಕ್ತಾರ್ ಅವರಿಗೆ ವಿವರಣೆ ನೀಡುವಂತೆ ಪಾಕಿಸ್ತಾನ ಸರ್ಕಾರ ಹೇಳಿದೆ.
ಹೇಳಿಕೆ ಸಂಬಂಧ ಪೂರ್ಣವಾದ ವಿವರಣೆ ನೀಡುವಂತೆ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹಗಾರ ಸತ್ರಾಜ್ ಅಜೀಜ್ ಚೌಧುರಿ ಅವರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ನವಾಜ್ ಷರೀಫ್ ಇನ್ನು ಈ ಹೇಳಿಕೆಗೆ ಸಂಬಂಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ಚೌಧರಿ ಈಗಾಗಲೇ ಪಾಕಿಸ್ತಾನ ಬಿಟ್ಟು ತೆರಳಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಇನ್ನು ಈ ಸಂಬಂಧ ಪಾಕ್ ಅಂತರಿಕ ಸಚಿವ ರೆಹಮಾನ್ ಮಲಿಕ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮುಕ್ತಾರ್ ಚೌಧುರಿ ಪಾಕಿಸ್ತಾನದ ರಕ್ಷಣಾ ಸಚಿವರೇ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಒಸಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿದ್ದುದ್ದು ಯಾರಿಗೂ ತಿಳಿದಿರಲಿಲ್ಲ. ಚೌಧುರಿ ಹೇಳಿಕೆ ಇಡಿ ಪಾಕಿಸ್ತಾನವೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಪ್ ಹೇಳಿದ್ದಾರೆ.
Advertisement