
ರೋಮ್: ಕಚೇರಿಯಲ್ಲೇ ಊಟದ ವಿರಾಮದ ಅವಧಿಯಲ್ಲಿ ಪೋರ್ನ್ ವಿಡಿಯೋ ನೋಡುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಇಟಲಿಯ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಫಿಯೆಟ್ ಕಂಪನಿ ತನ್ನ ನೌಕರನ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಇಟಲಿಯ ಸುಪ್ರೀಂ ಕೋರ್ಟ್, ಉದ್ಯೋಗಿ ಕೆಲಸದ ಅವಧಿಯಲ್ಲಿ ಪೋರ್ನ್ ವೀಕ್ಷಿಸುತ್ತಿದ್ದ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಅರ್ಜಿ ವಜಾಗೊಳಿಸಿದೆ.
ತನ್ನ ಉದ್ಯೋಗಿ ಕೆಲಸದ ಅವಧಿಯಲ್ಲಿ ಪೋರ್ನ್ ವೀಕ್ಷಿಸುತ್ತಿದ್ದ, ಇದರಿಂದಾಗಿ ಆತ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾನೆ, ಈ ಹಿನ್ನೆಲೆಯಲ್ಲಿ ಉದ್ಯೋಗಿ ಮರಳಿ ಕಂಪನಿಗೆ ಬರುವುದು ಸಾಧ್ಯವಿಲ್ಲ ಎಂದು ಫಿಯೆಟ್ ಕಂಪನಿ ವಾದಿಸಿತ್ತು. ಪ್ರತಿಯಾಗಿ ವಾದಿಸಿದ್ದ ಕಂಪನಿ ನೌಕರ, ಊಟದ ವಿರಾಮದ ವೇಳೆ ಪೋರ್ನ್ ಚಿತ್ರದ ತುಣುಕನ್ನು ವೀಕ್ಷಿಸಿದ್ದಾಗಿ ಹೇಳಿದ್ದ.
ಉದ್ಯೋಗಿಯ ಪರವಾಗಿ ತೀರ್ಪು ನೀಡಿರಿಉವ ಇಟಲಿ ನ್ಯಾಯಾಲಯ ಊಟದ ವಿರಾಮದ ಅವಧಿಯಲ್ಲಿ ಪೋರ್ನ್ ವಿಡಿಯೋ ನೋಡುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಹೇಳಿದೆ.
Advertisement