ಲೈಂಗಿಕ ಕ್ರಿಯೆ ಮೂಲಕ ಎಬೋಲಾ ವೈರಸ್ ಹರಡಿದ ಮೊದಲ ಪ್ರಕರಣ ಪತ್ತೆ

ಲೈಂಗಿಕ ಕ್ರಿಯೆ ಮೂಲಕ ಎಬೋಲ ವೈರಸ್ ಹರಡಿರುವ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಲಿಬೇರಿಯಾದ ಮಹಿಳೆಯೊಬ್ಬರಿಗೆ ಲೈಂಗಿಕವಾಗಿ ಎಬೋಲಾ ವೈರಸ್ ಹರಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಎಬೋಲ ವೈರಸ್(ಸಂಗ್ರಹ ಚಿತ್ರ)
ಎಬೋಲ ವೈರಸ್(ಸಂಗ್ರಹ ಚಿತ್ರ)

ನ್ಯೂಯಾರ್ಕ್: ಲೈಂಗಿಕ ಕ್ರಿಯೆ ಮೂಲಕ ಎಬೋಲ ವೈರಸ್ ಹರಡಿರುವ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಲಿಬೇರಿಯಾದ ಮಹಿಳೆಯೊಬ್ಬರಿಗೆ ಲೈಂಗಿಕವಾಗಿ ಎಬೋಲಾ ವೈರಸ್ ಹರಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಜೀನೋಮಿಕ್ ವಿಶ್ಲೇಷಣೆ ಮೂಲಕ ಎಬೋಲಾದಿಂದ ಚೇತರಿಸಿಕೊಂಡಿರುವ ವ್ಯಕ್ತಿಯಿಂದ ಆತನ ಸಂಗಾತಿಗೆ ಎಬೋಲಾ ಕಾಯಿಲೆ ಹರಡಿರುವುದನ್ನು ಪತ್ತೆ ಮಾಡಬಹುದಬಹುದಾಗಿದೆ. ಲಿಬೆರಿಯನ್ ಜೈವಿಕ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಅಮೆರಿಕಾದ ಆರ್ಮಿ ವಿಜ್ಞಾನಿಗಳ ಸಹಯೋಗದಲ್ಲಿ ನಡೆದ ಸಂಶೋಧನೆಯಿಂದ ಮಹಿಳೆಗೆ ಲೈಂಗಿಕ ಕ್ರಿಯೆ ಮೂಲಕ ಎಬೋಲಾ ವೈರಸ್ ಹರಡಿರುವುದು ಬಹಿರಂಗವಾಗಿದೆ.
ಎಬೋಲಾಗೆ ತುತ್ತಾಗಿರುವ ಮಹಿಳೆ ಎಬೋಲಾ ಪೀಡಿತ ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಲೈಂಗಿಕ ಕ್ರಿಯೆ ನಡೆಸಿದ್ದ ವ್ಯಕ್ತಿಗೆ 2014 ರ ಅಕ್ಟೋಬರ್ ನಲ್ಲಿ ಎಬೋಲಾ ವೈರಾಣುಗಳು ಇಲ್ಲದೇ ಇರುವುದು ಖಾತ್ರಿಯಾಗಿತ್ತು. ಆದರೆ ವೈರಾಣುಗಳು ಸಂಪೂರ್ಣವಾಗಿ ನಾಶವಾಗುವ ಮುನ್ನವೇ ಲೈಂಗಿಕ ಕ್ರಿಯೆ ನಡೆಸಿದ್ದ ಹಿನ್ನೆಲಯಲ್ಲಿ ಎಬೋಲಾ ಪೀಡಿತ ವ್ಯಕ್ತಿಯ ಸಂಗಾತಿಗೂ ಎಬೋಲಾ ವೈರಸ್ ಹರಡಿದಿದೆ. 
ಎಬೋಲಾದಿಂದ ಚೇತರಿಸಿಕೊಂಡಿರುವ ಪುರುಷರ ವೀರ್ಯಾಣುಗಳಲ್ಲಿ ಕನಿಷ್ಠ 9 ತಿಂಗಳ ಕಾಲ ಎಬೊಲ ವೈರಸ್  ಜೀವಂತವಾಗಿರುತ್ತವೆ ಎಂಬುದು ಹೊಸ ಸಂಶೋಧನೆ ಮೂಲಕ ಬಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com