ಕೈಲಾಶ್ ಸತ್ಯಾರ್ಥಿಗೆ ಮಾನವಾತಾವಾದಿ ಪ್ರಶಸ್ತಿ

ಖ್ಯಾತ ಮಕ್ಕಳು ಹಕ್ಕು ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರಿಗೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯವು 2015ರ ಮಾನವತಾವಾದಿ (ಹ್ಯುಮ್ಯಾನಿಟೇರಿಯನ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ...
ಮಕ್ಕಳು ಹಕ್ಕು ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ (ಸಂಗ್ರಹ ಚಿತ್ರ)
ಮಕ್ಕಳು ಹಕ್ಕು ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಖ್ಯಾತ ಮಕ್ಕಳು ಹಕ್ಕು ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರಿಗೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯವು 2015ರ ಮಾನವತಾವಾದಿ (ಹ್ಯುಮ್ಯಾನಿಟೇರಿಯನ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಜೀವನ ಮಟ್ಟದ ಸುಧಾರಣೆಗೆ ಅಪಾರ ಕೊಡಿಗೆಗಳನ್ನು ನೀಡಿ, ಇತರರಿಗೆ ಸ್ಪೂರ್ತಿ ತುಂಬಿದ ವ್ಯಕ್ತಿಗಳಿಗೆ ಅಮೆರಿಕಾದ ಈ ಪ್ರತಿಷ್ಟಿತ ವಿಶ್ವವಿದ್ಯಾಲಯವು ಪ್ರತೀವರ್ಷ ಮಾನವತಾವಾದಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಅದರಂತೆ ಈ ವರ್ಷದ ಪ್ರಶಸ್ತಿಯನ್ನು ಭಾರತದ ಮಕ್ಕಳ ಹಕ್ಕು ಹೋರಾಟಗಾರ ಎಂದೇ ಖ್ಯಾತಿಗಳಿಸಿರುವ ಕೈಲಾಶ್ ಸತ್ಯಾರ್ಥಿ ಅವರಿಗೆ ನೀಡಿ ಗೌರವಿಸಿದೆ.

ಮಕ್ಕಳ ಹಕ್ಕು ರಕ್ಷಣೆ, ದೌರ್ಜನ್ಯ, ಜೀತ ಪದ್ಧತಿ ನಿರ್ಮೂಲನೆ ಮಾಡಲು ಸತ್ಯಾರ್ಥಿ ಅವರು ವಹಿಸಿದ ಶ್ರಮ ಹಾಗೂ ಕೊಡುಗೆಯನ್ನು ಗಮನಿಸಿದ ವಿಶ್ವವಿದ್ಯಾಲಯವು ಈ ವರ್ಷದ ಪ್ರಶಸ್ತಿಯನ್ನು ಸತ್ಯಾರ್ಥಿಯವರಿಗೆ ನೀಡಿತು ಎಂದು ವಿಶ್ವವಿದ್ಯಾಲಯವು ಹೇಳಿಕೊಂಡಿದೆ.

ಪ್ರಶಸ್ತಿ ಪಡೆದ ಸಂತಸದಲ್ಲಿ ಪ್ರತಿಕ್ರಿಯೆ ನೀಡಿರುವ ಸತ್ಯಾರ್ಥಿಯವರು, ಈ ಪ್ರಶಸ್ತಿಯನ್ನು ಲಕ್ಷಾಂತರ ಸಂತ್ರಸ್ಥ ಮಕ್ಕಳ ಪರವಾಗಿ ನಾನು ಸ್ವೀಕರಿಸುತ್ತೇನೆ. ಈ ಜಗತ್ತಿನಿಂದ ಮಕ್ಕಳ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಒಗ್ಗಟ್ಟಾಗಿ ದುಡಿಯೋಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com