ಬರಾಕ್ ಒಬಾಮ
ವಿದೇಶ
ರಿಪಬ್ಲಿಕನ್ ಅಭ್ಯರ್ಥಿಯನ್ನು ಮುಂಗೋಪಿ ಬೆಕ್ಕು ಎಂದ ಒಬಾಮ
ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂಗೋಪಿ ಬೆಕ್ಕುಗಳಿಗೆ ಹೋಲಿಸಿದ್ದಾರೆ....
ವಾಷಿಂಗ್ಟನ್: ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂಗೋಪಿ ಬೆಕ್ಕುಗಳಿಗೆ ಹೋಲಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಮಾತನಾಡುತ್ತಾ ಒಬಾಮಾ ಅವರು ರಿಪಬ್ಲಿಕನ್ ಅಭ್ಯರ್ಥಿಗಳು ’ಮುಂಗೋಪಿ ಬೆಕ್ಕು’ಗಳಂತೆ ಇದ್ದಾರೆ ಎಂದು ಹೇಳಿ, ಮುಂಗೋಪಿ ಬೆಕ್ಕಿನ ಮುಖಭಾವವನ್ನೂ ಪ್ರದರ್ಶಿಸಿದರು ಎಂದು ಮಾಧ್ಯಮಗಳು ವರದಿಯಾಗಿದ್ದು, ಒಬಾಮಾ ಅವರ ಭಾಷಣ ಹಾಗೂ ಮುಂಗೋಪಿ ಬೆಕ್ಕಿನ ಮುಖಭಾವದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.

