ಸೌದಿ ದೊರೆ ಸಲ್ಮಾನ್ ಸ್ಥಾನಕ್ಕೆ ಅಹ್ಮದ್ ಕೂರಿಸಲು ಅರಮನೆಯಲ್ಲೇ ಸಂಚು

ಸೌದಿ ಅರೇಬಿಯಾದ ನೆಲ ಕ್ರಿಪ್ರಕ್ರಾಂತಿಗೆ ಸಜ್ಜಾಗಿದೆ. ಈಗಿನ ದೊರೆ ಸಲ್ಮಾನ್ ಉಚ್ಛಾಟನೆಗೆ ಆತನ 8 ಸಹೋದರರು ಬೆಂಬಲ ಸೂಚಿಸಿದ್ದು, ಅರಮನೆಯಲ್ಲಿ...
ಸೌದಿ ದೊರೆ ಸಲ್ಮಾನ್
ಸೌದಿ ದೊರೆ ಸಲ್ಮಾನ್

ರಿಯಾದ್: ಸೌದಿ ಅರೇಬಿಯಾದ ನೆಲ ಕ್ರಿಪ್ರಕ್ರಾಂತಿಗೆ ಸಜ್ಜಾಗಿದೆ. ಈಗಿನ ದೊರೆ ಸಲ್ಮಾನ್ ಉಚ್ಛಾಟನೆಗೆ ಆತನ 8 ಸಹೋದರರು ಬೆಂಬಲ ಸೂಚಿಸಿದ್ದು, ಅರಮನೆಯಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.

ಸೌದಿ ಅರೇಬಿಯಾದ ಸ್ಥಾಪಕ ಚಕ್ರವರ್ತಿ ಅಬ್ದುಲಜೀಜ್ ಇಬಿನ್ ಸೌದ್‌ನ ಬದುಕಿರುವ 12 ಮಂದಿ ಮಕ್ಕಳಲ್ಲಿ 8 ಜನರೂ ಈಗಿನ ದೊರೆ ಸಲ್ಮಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ತಮ್ಮ ಕಿರಿಯ ಸೋದರ ಅಹ್ಮದ್ ಬಿನ್ ಅಬ್ದುಲಜೀಜ್ ಅವರನ್ನು ಪಟ್ಟಕ್ಕೇರಿಸಲು ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ. 79 ವರ್ಷದ ದೊರೆ ಸಲ್ಮಾನ್ ರೋಗಿಷ್ಠನಾಗಿದ್ದು, ಹಲವು ಆರೋಪಗಳನ್ನು ಹೊತ್ತಿದ್ದಾನೆ.

ದೊರೆ ಸಲ್ಮಾನ್ ಉಚ್ಛಾಟನೆಗೆ ಅರಮನೆಯಲ್ಲೇ ಭಾರಿ ಸಂಚು ನಡೆಯುತ್ತಿದ್ದು, ಪ್ರಭಾವಿ ಉಲೇಮಾಗಳು ಇದಕ್ಕೆ ಬೆಂಬಲ ನೀಡಿದ್ದಾರೆ. ರಾಜಕುಮಾರ ಮತ್ತು ಮಾಜಿ ಒಳಾಡಳಿತ ಸಚಿವ ಅಹ್ಮದ್ ಬಿನ್ ಅದ್ಬುಲ್ಲಜೀಜ್ ಅವರನ್ನು ಸೌದಿ ಸಾಮ್ರಾಜ್ಯದ ದೊರೆಯಾಗಿಸಲು ಒಳಗೊಳಗೇ ಸಿದ್ಧತೆಗಳು ನಡೆಯುತ್ತಿವೆ.

1934ರಲ್ಲೂ ಆಗಿನ ದೊರೆ ಸೌದ್ ಅವರ ಉಚ್ಛಾಚನೆಯಾಗಿತ್ತು. ಇಡೀ ಅರಮನೆ ಇವರ ವಿರುದ್ಧ ತಿರುಗಿಬಿದ್ದಿದ್ದರಿಂದ ಅಧಿಕಾರ ಕಳೆದುಕೊಂಡಿದ್ದರು. ದೊರೆ ಸಲ್ಮಾನ್ ಅವರ ವಿಚಾರದಲ್ಲೂ ಅದೇ ಪರಿಸ್ಥಿತಿ ಮರುಕಳಿಸುವ ಸಂಭವ ಇದೆ.

ಉಚ್ಛಾಟನೆ ಯಾಕೆ? ಈಗಾಗಲೇ ಇಳಿ ವಯಸ್ಸಿನಲ್ಲಿರುವ ದೊರೆ ಸಲ್ಮಾನ್, ಅಲ್‌ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಇವರ ಮೇಲೆ ಹಲವು ಆರೋಪಗಳೂ ಇವೆ. ಸರಕಾರದ ಬೊಕ್ಕಸಕ್ಕೆ ಭಾರಿ ನಷ್ಟ ತಂದ ಯೆಮನ್‌ನಲ್ಲಿ ನಡೆಯುತ್ತಿರುವ ಯುದ್ಧ , ಕೆಲವು ವಿವಾದಾತ್ಮಕ ನೇಮಕಗಳು ಮತ್ತು ಇತ್ತೀಚಿನ ಹಜ್ ದುರಂತ ಇವರ ವಿರುದ್ಧ ಜನರಿಗೆ ಅಸಮಾಧಾನ ಭುಗಿಲೇಳುವಂತೆ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com