ಗ್ರೀಸ್ ನಲ್ಲಿ 3,500 ವರ್ಷ ಹಿಂದಿನ ಅಸ್ತಿಪಂಜರ, ಚಿನ್ನಾಭರಣ ನಿಧಿ ಪತ್ತೆ

ಸುಮಾರು 3,500 ವರ್ಷಗಳ ಹಿಂದಿನ ಕಾಲದಲ್ಲಿದ್ದ ಯೋಧನ ಅಸ್ತಿ ಪಂಜರ ಮತ್ತು ಭಾರಿ ನಿಧಿಯನ್ನು ಅಮೇರಿಕಾದ...
ಅಸ್ತಿಪಂಜರದೊಂದಿಗೆ ದೊರೆತ ಚಿನ್ನಾಭರಣ(ಚಿತ್ರ ಕೃಪೆ: ಎಎಫ್ ಪಿ)
ಅಸ್ತಿಪಂಜರದೊಂದಿಗೆ ದೊರೆತ ಚಿನ್ನಾಭರಣ(ಚಿತ್ರ ಕೃಪೆ: ಎಎಫ್ ಪಿ)
Updated on
ಅಥೆನ್ಸ್: ಸುಮಾರು 3,500 ವರ್ಷಗಳ ಹಿಂದಿನ ಕಾಲದಲ್ಲಿದ್ದ ಯೋಧನ ಅಸ್ತಿ ಪಂಜರ ಮತ್ತು ಭಾರಿ ನಿಧಿಯನ್ನು ಅಮೇರಿಕಾದ ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ. 
ಗ್ರೀಸ್ ನಲ್ಲಿ ಈ ಶೋಧ ನಡೆಸಿದ್ದು, ಅಸ್ತಿ ಪಂಜರದ ಜೊತೆಗೆ ಬಹಳ ಬೆಲೆಯುಳ್ಳ ಚಿನ್ನದ ಆಭರಣಗಳು ದೊರೆತಿವೆ. ಈ ಯೋಧ ಧರಿಸಿದ್ದ ಉಂಗುರ, ಹವಳ, ಮುತ್ತುನಿಂದ ಮಾಡಿರುವಂತದ್ದು, ದಂತ ಮತ್ತು ಚಿನ್ನದಿಂದ ಮಾಡಿದಂತಹ ಸರ ಸೇರಿದಂತೆ ಕಂಚು, ಬೆಳ್ಳಿಯ ಆಭರಣಗಳು ಸಿಕ್ಕಿವೆ. ಈ ಚಿನ್ನದ ಆಭರಣಗಳನ್ನು ಮಿನಾನ್ಸ್ ಶೈಲಿಯಲ್ಲಿ ಮಾಡಲಾಗಿದೆ. 
ಮರದ ಶವಪೆಟ್ಟಿಗೆಯಲ್ಲಿ ಈ ಯೋಧನ ಶವವನ್ನು ಇಡಲಾಗಿತ್ತು. ಆದರೆ, ಈತ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅಸ್ತಿಪಂಜರದೊಂದಿಗೆ ಇಷ್ಟೊಂದು ಬೆಲೆ ಬಾಳುವ ಆಭರಣಗಳು ಸಿಕ್ಕಿವೆ ಎಂದರೆ ಇತಿಯಾಸ ಅಧ್ಯಯನದ ವಿಷಯದಲ್ಲಿ ಈತನ ಶವ ಬಹಳ ಮಹತ್ವದಾಗಿದೆ ಎಂದು ತಜ್ಞರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com