ಉತ್ತರದಲ್ಲಿ ಮತ್ತೆ ಭೂಕಂಪ

ನೇಪಾಳದ ಕಹಿನೆನಪಿಗೆ ಇನ್ನೂ ಆರೇ ತಿಂಗಳು. ಆಗಲೇ ಮತ್ತೆ ಭೂಮಿ ನಡುಗಿದೆ. ಈ ಬಾರಿ ಭೂಕಂಪದ ಅಟ್ಟಹಾಸಕ್ಕೆ ತುತ್ತಾಗಿರುವುದು...
ಭೂಕಂಪದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುತ್ತಿರುವುದು
ಭೂಕಂಪದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುತ್ತಿರುವುದು
ನವದೆಹಲಿ: ನೇಪಾಳದ ಕಹಿನೆನಪಿಗೆ ಇನ್ನೂ ಆರೇ ತಿಂಗಳು. ಆಗಲೇ ಮತ್ತೆ ಭೂಮಿ ನಡುಗಿದೆ. ಈ ಬಾರಿ ಭೂಕಂಪದ ಅಟ್ಟಹಾಸಕ್ಕೆ ತುತ್ತಾಗಿರುವುದು ಆಫ್ಘಾನಿಸ್ತಾನ ಮತ್ತು
ಪಾಕಿಸ್ತಾನ. ರಿಕ್ಟರ್ ಮಾಪಕದಲ್ಲಿ 7.5ರಷ್ಟಿದ್ದ ತೀವ್ರತೆಯಿಂದಾಗಿ ಸತ್ತವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಸದ್ಯ 233 ಮಂದಿ ಮೃತಪಟ್ಟ ವರದಿಯಿದ್ದು, 1000 ಕ್ಕೂ ಹೆಚ್ಚು
ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ಕೇಂದ್ರ ಸ್ಥಾನ ಆಫ್ಘಾನಿಸ್ತಾನದ ಜಮರ್ ಪ್ರದೇಶ. ಇದು ಕಾಬೂಲ್‍ನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಆದರೆ, ಭೂಕಂಪದಿಂದಾಗಿ ಹೆಚ್ಚು ಮಂದಿ ಮೃತಪಟ್ಟದ್ದು ಪಾಕಿಸ್ತಾನದಲ್ಲಿ. ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ 150 ಮಂದಿ ಬಲಿಯಾದರೆ, ಪಂಜಾಬ್‍ನಲ್ಲಿ 5, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಇನ್ನು ಆಪ್ಘಾನಿಸ್ತಾನದಲ್ಲಿ ಒಟ್ಟು 30 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಭೂಮಾಪನ ಇಲಾಖೆಯ ಪ್ರಕಾರ ಭೂಕಂಪ ಸಂಭವಿಸಿದ್ದು ಮಧ್ಯಾಹ್ನ 2.09ಕ್ಕೆ. ಹಠಾತ್ತನೇ ಭೂಮಿ ನಡುಗುತ್ತಿರುವುದನ್ನು ನೋಡಿದ ಮಂದಿ ಕೂಡಲೇ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇದಷ್ಟೇ ಅಲ್ಲ, ಪಾಕಿಸ್ತಾನದ ಕೆಲವೆಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತವೂ ಸಂಭವಿಸಿ ದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com