ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಕೆನಡಾದ ಕನ್ಸರ್ವೇಟೀವ್ ಪಕ್ಷದ ಪ್ರತಿನಿಧಿ, ಕ್ಷಮೆ ಯಾಚನೆ

ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಫರ್ ಪ್ರತಿನಿಧಿಸುವ ಕನ್ಸರ್ವೇಟೀವ್ ಪಕ್ಷದ ಪ್ರತಿನಿಧಿ ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಬಹಿರಂಗವಾಗಿದೆ.
ಕನ್ಸರ್ವೇಟೀವ್ ಪಕ್ಷ  ಪ್ರತಿನಿಧಿಸುವ ಪ್ರಧಾನಿ(ಸಾಂಕೇತಿಕ ಚಿತ್ರ)
ಕನ್ಸರ್ವೇಟೀವ್ ಪಕ್ಷ ಪ್ರತಿನಿಧಿಸುವ ಪ್ರಧಾನಿ(ಸಾಂಕೇತಿಕ ಚಿತ್ರ)

ಟೊರೊಂಟೊ: ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಫರ್ ಪ್ರತಿನಿಧಿಸುವ ಕನ್ಸರ್ವೇಟೀವ್ ಪಕ್ಷದ ಪ್ರತಿನಿಧಿ ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಬಹಿರಂಗವಾಗಿದೆ.

ಉಪಕರಣಗಳ ದುರಸ್ತಿ ಕಂಪನಿಯನ್ನು ನಡೆಸುತ್ತಿರುವ ಕನ್ಸರ್ವೇಟೀವ್ ಪಕ್ಷದ ಪ್ರತಿನಿಧಿ ಜೆರ್ರಿ ಬ್ಯಾನ್ಸ್ , ಕೆನಡಾ ನಾಗರಿಕರ ಮನೆಯಲ್ಲಿ ಉಪಕರಣವೊಂದರ ದುರಸ್ತಿ ಕೆಲಸ ಮಾಡುತ್ತಿರಬೇಕಾದರೆ ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವುದನ್ನು ಕೆನೆಡಿಯನ್ ಬ್ರಾಡ್ಕಾಸ್ಟ್  ಸಂಸ್ಥೆ ಸೆರೆಹಿಡಿದಿದೆ. ಉಪಕರಣವೊಂದರ ದುರಸ್ತಿ ಕೆಲಸ ಮಾಡುತ್ತಿದ್ದ ಜೆರ್ರಿ ಬ್ಯಾನ್ಸ್ ಮನೆಯ ಮಾಲೀಕ ಮತ್ತೊಂದು ರೂಂ ನಲ್ಲಿರಬೇಕಾದರೆ, ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದರು. 2012 ರಲ್ಲಿ ಈ ಘಟನೆ ನಡೆದಿದ್ದು, ಬ್ಯಾನ್ಸ್ ಈ ಬಗ್ಗೆ ವಿಷಾದ ವ್ಯಕಪಡಿಸಿದ್ದಾರೆ.

ವಿಡಿಯೋ ಫುಟೇಜ್ ನಲ್ಲಿ ಇರುವ ವ್ಯಕ್ತಿ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಕೆನಡಾದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಪ್ರಧಾನಿ ಸ್ಟೀಫನ್ ಹಾರ್ಫರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಈ ಬೆನ್ನಲ್ಲೇ ತಮ್ಮ ಪಕ್ಷವನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬರು, ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅನಾಗರಿಕರಾಗಿ ವರ್ತಿಸಿರುವುದು ಪ್ರಧಾನಿಗೆ ತೀವ್ರ ಮುಜುಗರ ಉಂಟುಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com