ಭಾರತೀಯ ಮೂಲದ ವಿದ್ಯಾರ್ಥಿ ಆತ್ಮಹತ್ಯೆ: ಅಮೇಜಾನ್, ಯುಎಸ್ ವಿವಿ ವಿರುದ್ಧ ಮೊಕದ್ದಮೆ

ಮಹಿಳೆಯೊಬ್ಬರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಅಮೆಜಾನ್
ಅಮೆಜಾನ್

ನ್ಯೂಯಾರ್ಕ್: ಭಾರತ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಹಾಗೂ  ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿರುದ್ಧ ಮಹಿಳೆಯೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ತಮ್ಮ ಮಗಳು ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು, ಇದಕ್ಕೆ ಅಮೇಜಾನ್ ಹಾಗೂ ವಿಶ್ವವಿದ್ಯಾನಿಲಯವೇ ಕಾರಣ ಎಂದು ಮೊಕದ್ದಮೆ ದಾಖಲಿಸಿರುವ ಮಹಿಳೆ ಆರೋಪಿಸಿದ್ದಾರೆ. ನರ್ಸಿಂಗ್ ವಿದ್ಯಾರ್ಥಿನಿಗೆ ಅದೇ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ್ದ, ವಿದ್ಯಾರ್ಥಿಯ ವಿರುದ್ಧ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿಲ್ಲ, ಅಲ್ಲದೇ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿಯೊಂದಿಗೆ ಅನುಕಂಪವಿಲ್ಲದೇ ನಡೆದುಕೊಳ್ಳಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.

ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿನಿ, ಅಡಿಗೆಗೆ ಅಗತ್ಯವಿರುವ ಪದಾರ್ಥಗಳ ಪಟ್ಟಿಯಲ್ಲಿ ಸೈನೈಡ್ ಸೇರಿಸಿದ್ದ ಯುವತಿ ಅಮೇಜಾನ್ ವೆಬ್ ಸೈಟ್ ನಿಂದ ಸೈನೈಡ್ ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಅಮೆಜಾನ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. 2013 ರ ಫೆ.2 ವರೆಗೆ ಅಮೇಜಾನ್ ನಲ್ಲಿ ಸೈನೈಡ್ ಮಾರಾಟ ಮಾಡಲಾಗಿತ್ತು. ಸೈನೈಡ್ ಖರೀಸಿದ್ದವರ ಪೈಕಿ 11 ಜನರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com