ಬ್ರಿಟನ್ ಮೊದಲ ಡ್ರೋನ್ ದಾಳಿಗೆ ಸಿರಿಯಾದಲ್ಲಿ ಇಬ್ಬರು ಐ ಎಸ್ ಉಗ್ರರ ಹತ್ಯೆ

ತಮ್ಮ ದೇಶ ನಡೆಸಿದ ಮೊದಲ ವಾಯುಮಾನ ದಾಳಿಗೆ ಆಗಸ್ಟ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ನ ಇಬ್ಬರು ಉಗ್ರರು ಸಿರಿಯಾ ಮತ್ತು ಇರಾಕ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಬ್ರಿಟಿಶ್
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸದಸ್ಯರು (ಸಂಗ್ರಹ ಚಿತ್ರ)
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸದಸ್ಯರು (ಸಂಗ್ರಹ ಚಿತ್ರ)

ಲಂಡನ್: ತಮ್ಮ ದೇಶ ನಡೆಸಿದ ಮೊದಲ ವಾಯುಮಾನ ದಾಳಿಗೆ ಆಗಸ್ಟ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ನ ಇಬ್ಬರು ಉಗ್ರರು ಸಿರಿಯಾ ಮತ್ತು ಇರಾಕ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಬ್ರಿಟಿಶ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ. ಈ ಇಬ್ಬರು ಉಗ್ರರು ಬ್ರಿಟಿಶ್ ನೆಲದ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದರು ಎಂದು ಕೂಡ ಅವರು ಹೇಳಿದ್ದಾರೆ.

ಗಾರ್ಡಿಯನ್ ವರದಿ ಮಾಡಿರುವ ಪ್ರಕಾರ, ಈ ದಾಳಿಯಲ್ಲಿ ರಿಯಾದ್ ಖಾನ್ ಗುರಿಯಾಗಿದ್ದನು ಮತ್ತು ನಿಖರ ಡ್ರೋನ್ ದಾಳಿಗೆ ಅವನ ಹತೆಯ್ಯಾಗಿದೆ ಎಂದು ಕ್ಯಾಮರೂನ್ ಬ್ರಿಟಿಷ್ ರಾಜಕಾರಿಣಿಗಳಿಗೆ ತಿಳಿಸಿದ್ದಾರೆ.

ಬ್ರಿಟಿಶ್ ರಾಯಲ್ ಏರ್ ಫೋರ್ಸ್ (ಆರ್ ಎ ಎಫ್) ಈ ದಾಳಿ ನಡೆಸಿದ್ದು, ರಾವುಲ್ ಅಮಿನ್ ಎಂಬ ಬ್ರಿಟನ್ ಮೂಲದ ಉಗ್ರಗಾಮಿ ಕೂಡ ಮೃತಪಟ್ಟಿದ್ದಾನೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ.

ಅನ್ಯಮಾರ್ಗವಿಲ್ಲದೆ ಈ ಕ್ರಮ ತೆಗೆದುಕೊಂಡಿರುವುದಾಗಿ ಕ್ಯಾಮರೂನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com