ಕಾಶ್ಮೀರ ಒಳಗೊಂಡರೆ ಮಾತ್ರ ಭಾರತದೊಂದಿಗೆ ಚರ್ಚೆ: ಸರ್ತಜ್ ಅಜೀಜ್

ಚರ್ಚೆಯ ವಿಷಯದ ಭಾಗವಾಗಿ ಕಾಶ್ಮೀರವನ್ನು ಒಳಗೊಂಡರೆ ಮಾತ್ರ ಭಾರತದೊಂದಿದೆ ಮಾತುಕತೆ ನಡೆಸಲು ಸಾಧ್ಯ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್

ಇಸ್ಲಾಮಾಬಾದ್: ಚರ್ಚೆಯ ವಿಷಯದ ಭಾಗವಾಗಿ ಕಾಶ್ಮೀರವನ್ನು ಒಳಗೊಂಡರೆ ಮಾತ್ರ ಭಾರತದೊಂದಿದೆ ಮಾತುಕತೆ ನಡೆಸಲು ಸಾಧ್ಯ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ ಮಂಗಳವಾರ ಹೇಳಿದ್ದಾರೆ.

ಕಾಶ್ಮೀರವನ್ನು ಒಳಗೊಂಡಂತೆ ಚರ್ಚಿಸಲು ಉಳಿದಿರುವ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ಇಸ್ಲಾಮಾಬಾದ್ ನಿಲುವನ್ನು ಇಡಿ ವಿಶ್ವವೇ ಒಪ್ಪಿಕೊಂಡಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ, ಭಾರತಕ್ಕೆ ಬೇಕಿರುವ ಅಪರಾಧಿ ದಾವುದ್ ಇಬ್ರಾಹಿಂ ಅಡಗಿದ್ದಾನೆ ಎಂಬ ಆರೋಪವನ್ನು ಸರ್ತಜ್ ತಳ್ಳಿಹಾಕಿದ್ದು, ಇದಕ್ಕೆ ದಿಟ್ಟ ಉತ್ತರ ನೀಡಲಾಗುವುದು ಎಂದಿದ್ದಾರೆ,

ಭಾರತ ಗಡಿ ಭದ್ರತಾ ಪಡೆಯ ಕಮ್ಯಾಂಡರ್ ಮತ್ತು ಪಾಕಿಸ್ತಾನ ರೇಂಜರ್ಸ್ ಅಧ್ಯಕ್ಷರ ನಡುವೆ ಬುಧವಾರ ನವದೆಹಲಿಯಲ್ಲಿ ಸಭೆ ನಡೆಯಲಿದ್ದು, ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಗ್ನತೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಲಹೆಗಾರ ಹೇಳಿದ್ದಾರೆ.

೨೦೦೩ ರ ಕನವಿರಾಮ ಒಪ್ಪಂದವನ್ನು ಜಾರಿ ಮಾಡುವ ವಿಷಯವನ್ನು ಸಭೆಯಲ್ಲಿ ಎತ್ತಲಾಗುವುದು ಎಂದು ಸಲಹೆಗಾರ ತಿಳಿಸಿದ್ದು, ಮೊದಲನೆಯ ದಿನದಿಂದಲೂ ಭಾರತ ಸರ್ಕರಾದ ನೀತಿಗಳು ಪಾಕಿಸ್ತಾನಿ ವಿರೋಧಿಯಾಗಿವೆ ಎಂದಿದ್ದಾರೆ ಸರ್ತಜ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com