ಮೆಕ್ಕಾ ದುರಂತ: ಸಾವಿನ ಸಂಖ್ಯೆ 107ಕ್ಕೆ ಏರಿಕೆ

ಸೌದಿ ಅರೇಬಿಯಾದ ಪವಿತ್ರ ಮುಸ್ಲಿಂ ನಗರ ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ಕ್ರೇನ್ ಬಿದ್ದು ಕನಿಷ್ಟ 65 ಜನ ಸಾವನ್ನಪ್ಪಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಕ್ರೇನ್ ಬಿದ್ದಿರುವ ದೃಶ್ಯ. ಚಿತ್ರ: ಟ್ವಿಟ್ಟರ್
ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಕ್ರೇನ್ ಬಿದ್ದಿರುವ ದೃಶ್ಯ. ಚಿತ್ರ: ಟ್ವಿಟ್ಟರ್
Updated on

ರಿಯಾದ್: ಸೌದಿ ಅರೇಬಿಯಾದ ಪವಿತ್ರ ಮುಸ್ಲಿಂ ನಗರ ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ಕ್ರೇನ್ ಬಿದ್ದು ಕನಿಷ್ಟ 65 ಜನ ಸಾವನ್ನಪ್ಪಿ 80ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಇಲಾಖೆ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ತಿಳಿಸಿದೆ.

ಆ ಸಂದರ್ಭ ಭಾರೀ ಮಳೆ ಬೀಳುತ್ತಿತ್ತು. ಕ್ರೇನ್ ಗೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ ಎಂದು ತಿಲಿದುಬಂದಿದೆ. ರಕ್ತಸಿಕ್ತ ಮೃತ ದೇಹಗಳು ಮಸೀದಿಯಲ್ಲಿ ಚೆಲಾಪಿಲ್ಲಿಯಾಗಿ ಬಿದ್ದಿರುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಮುಸ್ಸೀಮರ ವಾರ್ಷಿಕ ಹಜ್ ಯಾತ್ರೆ ಆರಂಭಕ್ಕೆ ಕೆಲವೇ ವಾರಗಳ ಮುನ್ನ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com