ಬೇರತ್: ಸಮುದ್ರದ ತಟಕ್ಕೆ ತೇಲಿ ಬಂದ 3 ವರ್ಷದ ಪುಟಾಣಿ ಆಯ್ಲನ್ ಕುರ್ದಿಯ ಮೃತದೇಹದ ಫೋಟೋ ವಿಶ್ವಾದ್ಯಂತದ ಜನರ ಮನ ಕಲಕಿದ್ದರೆ, ಐಎಸ್ ಐಸ್ ಉಗ್ರರು ಮಾತ್ರ ತಮ್ಮದು ಕಲ್ಲುಹೃದಯ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದೇ ಮಗುವಿನ ಫೋಟೋವನ್ನು ಬಳಸಿಕೊಂಡು, 'ಪಾಶ್ಚಿಮಾತ್ಯ ರಾಷ್ಟ್ರಗಳತ್ತ ವಲಸೆ ಹೋಗುತ್ತಿರುವ ಸಿರಿಯಾ ನಾಗರಿಕರಿಗೇ ಇದೇ ಗತಿ' ಎಂದು ಐಎಸ್ ಎಚ್ಚರಿಕೆ ಸಂದೇಶ ರವಾನಿಸಿದೆ.
ಆಂಗ್ಲ ಭಾಷೆಯ ನಿಯತಕಾಲಿಕ ದಬೀಕ್‍ನಲ್ಲಿ ಐಎಸ್ ಈ ಎಚ್ಚರಿಕೆ ಪ್ರಕಟಿಸಿದೆ. 'ದಾರುಲ್ ಇಸ್ಲಾಂ ಅನ್ನು ಬಿಟ್ಟುಹೋದರೆ ಇದೇ ಗತಿ' ಎಂಬ ಶೀರ್ಷಿಕೆಯಡಿ ಆಯ್ಲನ್ ನ ಫೋಟೋವನ್ನು ಪ್ರಕಟಿಸಲಾಗಿದೆ.