
ಇಸ್ಲಾಮಾಬಾದ್: ಪಾಕಿಸ್ತಾನ- ಚೀನಾ ಫ್ರೆಂಡ್ ಶಿಪ್ ಟನಲ್ ಉದ್ಘಾಟಿಸಿದ ನವಾಜ್ ಷರೀಫ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನ-ಚೀನಾ ಫ್ರೆಂಡ್ ಶಿಪ್ ಟನಲ್ ನ್ನು ಉದ್ಘಾಟನೆ ಮಾಡಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನ್ ರಲ್ಲಿರುವ ಅಟ್ಟಾಬಾದ್ ನದಿಯ ಮೇಲೆ ಚೀನಾ ಟನಲ್ ನ್ನು ನಿರ್ಮಿಸಿದೆ. 2010 ರಲ್ಲಿ ಅಟ್ಟಾಬಾದ್ ನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ನಾಶವಾಗಿದ್ದ ಕಾರಕೋರಂ ಹೆದ್ದಾರಿಯ ಐದು ಟನಲ್ ನ್ನು ಟನಲ್ ನ್ನು ಪುನರ್ನಿಮಿಸಲಾಗಿದೆ.
ಇದೇ ಹೆದ್ದಾರಿಯಲ್ಲಿರುವ ಎರಡು ಮುಖ್ಯ ಸೇತುವೆ ಹಾಗೂ 78 ಸಣ್ಣ ಸೇತುವೆಗಳನ್ನು ಸಹ ಪುನರ್ನಿಮಿಸಲಾಗಿದೆ. ಟನಲ್ ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಚೀನಾ ರಸ್ತೆ, ಮೇಲ್ಸೇತುವೆ ಕಾರ್ಪೊರೇಷನ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಮೂರು ವರ್ಷ ಎರಡು ತಿಂಗಳಲ್ಲಿ ಯೋಜನೆಯನ್ನು ಚೀನಾ ಸಹಯೋಗದಲ್ಲಿ ಪೂರ್ಣಗೊಳಿಸಲಾಗಿದೆ.
Advertisement