ಅಯ್ಲಾನ್ ಕುರ್ದಿ ಸಾವನ್ನು ವ್ಯಂಗ್ಯವಾಡಿದ ಚಾರ್ಲಿ ಹೆಬ್ಡೋ

ನಿರಾಶ್ರಿತರ ಕಣ್ಣೀರ ಕತೆ ಹೇಳಿದ, ವಿಶ್ವವೇ ಕಂಬನಿ ಮಿಡಿಯುವಂತೆ ಮಾಡಿದ ಅಯ್ಲಾನ್ ಕುರ್ದಿ ಎಂಬ ಬಾಲಕನ ಫೋಟೋ ಬಳಸಿ ಚಾರ್ಲಿ ಹೆಬ್ಡೋ ಪತ್ರಿಕೆ ವ್ಯಂಗ್ಯ ಚಿತ್ರ...
ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರ
ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರ

ಪ್ಯಾರಿಸ್: ನಿರಾಶ್ರಿತರ ಕಣ್ಣೀರ ಕತೆ ಹೇಳಿದ, ವಿಶ್ವವೇ ಕಂಬನಿ ಮಿಡಿಯುವಂತೆ ಮಾಡಿದ ಅಯ್ಲಾನ್ ಕುರ್ದಿ ಎಂಬ ಬಾಲಕನ ಫೋಟೋ ಬಳಸಿ ಚಾರ್ಲಿ ಹೆಬ್ಡೋ ಪತ್ರಿಕೆ ವ್ಯಂಗ್ಯ ಚಿತ್ರ ರಚಿಸಿದ್ದು ವಿವಾದಕ್ಕೀಡಾಗಿದೆ. ಸಿರಿಯಾದಿಂದ ಯುರೋಪ್‌ಗೆ ಪ್ರಯಾಣ ಮಾಡುತ್ತಿದ್ದ ನಿರಾಶ್ರಿತ ಕುಟುಂಬದ ಮಗು ಅಯ್ಲಾನ್ ಕುರ್ದಿ ದೋಣಿ ಮಗುಚಿ ಸಮುದ್ರ ಪಾಲಾಗಿದ್ದನು. ಮೂರು ವರ್ಷದ ಕುರ್ದಿ ಟರ್ಕಿಯ ಕಡಲ ಕಿನಾರೆಯಲ್ಲಿ ಸತ್ತು ಬಿದ್ದಿರುವ ಫೋಟೋ ಎಂತವರ ಮನವನ್ನೂ ಕಲಕುವಂತಿತ್ತು.

ಇದೀಗ ಕುರ್ದಿಯ ಆ ಚಿತ್ರವನ್ನು ಕಾರ್ಟೂನ್ ನಲ್ಲಿ ಬಳಸಿ ಚಾರ್ಲಿ ಹೆಬ್ಡೋ ಪತ್ರಿಕೆ ನಿರಾಶ್ರಿತ ಸಮುದಾಯವನ್ನೇ ವ್ಯಂಗ್ಯ ಮಾಡಿದೆ. ಎರಡು ಕಾರ್ಟೂನ್‌ಗಳನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿದ್ದು, ಈ ಕಾರ್ಟೂನ್‌ಗಳ ವಿರುದ್ಧ ಜನ ಸಿಡಿದೆದ್ದಿದ್ದಾರೆ.



(ಅಯ್ಲಾನ್ ಕುರ್ದಿ )

ಒಂದು ಕಾರ್ಟೂನ್‌ನಲ್ಲಿ ಮೆಕ್‌ಡೊನಾಲ್ಡ್ ನ ಜಾಹೀರಾತು ಫಲಕದ ಮುಂದೆ ಕುರ್ದಿ ಸತ್ತು ಬಿದ್ದಿರುವ ಚಿತ್ರ ರಚಿಸಲಾಗಿದೆ.
ನಿರಾಶ್ರಿತರಿಗೆ ಸ್ವಾಗತ...ನೀವು ನಿಮ್ಮ ಗುರಿಯ ಹತ್ತಿರ ತಲುಪಿದ್ದೀರಿ. ಪ್ರೊಮೋಷನಲ್ ಆಫರ್. ಕಿಡ್ಸ್ ಮೆನುನಲ್ಲಿ ಒಂದು ಐಟಂನ ಬೆಲೆಗೆ 2 ಸಿಗುತ್ತದೆ ಎಂದು ಕಾರ್ಟೂನ್ ನಲ್ಲಿ ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com