ಹಿಂದೂ ರಾಷ್ಟ್ರದ ಪ್ರಸ್ತಾಪ ತಿರಸ್ಕೃತ

ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂಬ ಪ್ರಸ್ತಾಪವನ್ನು ಇಲ್ಲಿನ ಅಸೆಂಬ್ಲಿಯು ಸೋಮವಾರ ತಿರಸ್ಕರಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಠ್ಮಂಡು: ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂಬ ಪ್ರಸ್ತಾಪವನ್ನು ಇಲ್ಲಿನ ಅಸೆಂಬ್ಲಿಯು ಸೋಮವಾರ ತಿರಸ್ಕರಿಸಿದ್ದು, ಹಿಂದೂ ಬಹುಸಂಖ್ಯಾತರಿರುವ ನೇಪಾಳವು ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯಲಿದೆ ಎಂದಿದೆ.

ಹಿಂದೂಪರ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಯು ನೇಪಾಳದ ಸಂವಿಧಾನಕ್ಕೆ ತಿದ್ದುಪಡಿ ತಂದು, ದೇಶವನ್ನು ಹಿಂದೂರಾಷ್ಟ್ರವೆಂದು ಘೋಷಿಸುವ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಮೂರನೇ ಎರಡರಷ್ಟು ಸಂಸದರು ವಿರೋಧಿಸಿದರು.

601 ಸದಸ್ಯಬಲದ ಅಸೆಂಬ್ಲಿಯಲ್ಲಿ ಕೇವಲ 21 ಮಂದಿಯಷ್ಟೇ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು. 2006ರ ಜನರ ಚಳವಳಿ ಯಶಸ್ಸಾದ ಹಿನ್ನೆಲೆಯಲ್ಲಿ 2007ರಲ್ಲಿ ನೇಪಾಳವನ್ನು ಜಾತ್ಯತೀತ ದೇಶ ಎಂದು ಘೋಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com