ಅಯ್ಲಾನ್ ಕುರಿತ ವಿವಾದಿತ ವ್ಯಂಗ್ಯಚಿತ್ರ ಪ್ರಕಟಿಸಿದ ಹೆಬ್ಡೋ

ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿ, ಉಗ್ರರ ದಾಳಿಗೆ ಗುರಿಯಾಗಿದ್ದ ಫ್ರಾನ್ಸ್ ನ...
ಚಿತ್ರ ಕೃಪೆ: (Twitter: Abu Typo)
ಚಿತ್ರ ಕೃಪೆ: (Twitter: Abu Typo)

ಪ್ಯಾರಿಸ್: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿ, ಉಗ್ರರ ದಾಳಿಗೆ ಗುರಿಯಾಗಿದ್ದ ಫ್ರಾನ್ಸ್ ನ ಚಾರ್ಲಿ ಹೆಬ್ಡೋ ನಿಯತಕಾಲಿಕವು ಈಗ ಮತ್ತೊಂದು ವಿವಾದ ಸೃಷ್ಟಿಸಿದೆ.

ದೋಣಿ ದುರಂತದಲ್ಲಿ ಮೃತಪಟ್ಟು ಸಮುದ್ರ ತಟಕ್ಕೆ ತೇಲಿಬಂದ ಸಿರಿಯಾದ 3 ವರ್ಷದ ಅಯ್ಲಾನ್  ಕುರ್ದಿಯನ್ನು ಅವಮಾನಿಸುವಂತಹ ವ್ಯಂಗ್ಯಚಿತ್ರಗಳನ್ನು ಈ ನಿಯತಕಾಲಿಕ ಪ್ರಕಟಿಸಿದೆ. ಈ ವಿವಾದಿತ ವ್ಯಂಗ್ಯಚಿತ್ರಗಳು ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಬಹುತೇಕ ಮಂದಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆ ಪುಟ್ಟ ಮಗುವಿಗೆ ಮಾಡಿದ ಅವಮಾನ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವ್ಯಂಗ್ಯಚಿತ್ರದಲ್ಲಿ ಅಯ್ಲಾನ್ ‍ನ ಮೃತದೇಹ ಬೀಚ್‍ನಲ್ಲಿ ಬಿದ್ದಿದೆ. ಪಕ್ಕದಲ್ಲೇ ಒಂದು ಬೋರ್ಡ್‍ನಲ್ಲಿ ``ಸೋ ಕ್ಲೋಸ್ ಟು ಹಿಸ್ ಗೋಲ್''(ತನ್ನ ಗುರಿ ಈಡೇರಿಸಲು ತುಂಬಾ ಸಮೀಪ ತಲುಪಿದ್ದಾನೆ) ಎಂದು ಬರೆಯಲಾಗಿದೆ. ಮತ್ತೊಂದರಲ್ಲಿ, ಅಯ್ಲಾನ್ ನೀರಿನಲ್ಲಿ ಮುಳುಗುತ್ತಿದ್ದಾನೆ. ಕಾಲುಗಳಷ್ಟೇ ಮುಳುಗಲು ಬಾಕಿಯಿವೆ.

ಪಕ್ಕದಲ್ಲಿ ಯೆೀಸುಕ್ರಿಸ್ತ ನಿಂತಿದ್ದಾನೆ. ಅಲ್ಲಿರುವ ಬೋರ್ಡ್‍ನಲ್ಲಿ ``ಕ್ರಿಶ್ಚಿಯನ್‍ಗಳು ನೀರಲ್ಲಿ ನಡೆಯುತ್ತಾರೆ, ಮುಸ್ಲಿಂ ಮಕ್ಕಳು ಮುಳುಗುತ್ತಾರೆ'' ಎಂದು ಬರೆಯಲಾಗಿದೆ.ಇಂತಹ ಇನ್ನೂ ಅನೇಕ ವ್ಯಂಗ್ಯಚಿತ್ರಗಳನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿದೆ.

ಇದನ್ನು ದ್ವೇಷಪೂರಿತ ಅಪರಾಧಕ್ಕೆ ಪ್ರೇರಣೆ ಎಂದು ಹೇಳಿರುವ ಸೊಸೈಟಿ ಆಫ್ ಬ್ಲ್ಯಾಕ್ ಲಾಯರ್ಸ್, ನಿಯತಕಾಲಿಕೆಯ ವಿರುದ್ಧ ಅಂತಾರಾಷ್ಟ್ರೀ ಯ ಕ್ರಿಮಿನಲ್ ಕೋರ್ಟಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com