ಅಮ್ಮನಿಗೆ ಪುನರ್ಜನ್ಮ ನೀಡಿದ ಮಗು!

ಮ್ಮಂದಿರು ಮಕ್ಕಳಿಗೆ ಜನ್ಮ ನೀಡುತ್ತಾರೆ, ಪಾಪುವಿನ ಅಳು, ನಗು ನೋಡಿ ಸಂತಸಗೊಳ್ಳುತ್ತಾರೆ. ಆದರೆ ಇಲ್ಲಿ ಮಗುವೊಂದು ಅಮ್ಮನಿಗೆ ಪುನರ್ಜನ್ಮ ನೀಡಿದೆ...
ಪತಿ ಜೆರಿಮಿ, ಮಗಳು ರೈಲಾನ್ ಜತೆ ಶೆಲ್ಲಿ
ಪತಿ ಜೆರಿಮಿ, ಮಗಳು ರೈಲಾನ್ ಜತೆ ಶೆಲ್ಲಿ
ನಾರ್ತ್ ಕರೋಲಿನಾ: ಅಮ್ಮಂದಿರು ಮಕ್ಕಳಿಗೆ ಜನ್ಮ ನೀಡುತ್ತಾರೆ, ಪಾಪುವಿನ ಅಳು, ನಗು ನೋಡಿ ಸಂತಸಗೊಳ್ಳುತ್ತಾರೆ. ಆದರೆ ಇಲ್ಲಿ ಮಗುವೊಂದು ಅಮ್ಮನಿಗೆ ಪುನರ್ಜನ್ಮ ನೀಡಿದೆ. ಇದು ಯಾವುದೇ ಸಿನಿಮಾದ ಕತೆಯಲ್ಲ. 2014ರಲ್ಲಿ ನಡೆದ ಸತ್ಯ ಘಟನೆ ಇದು. ಈ ಘಟನೆಯ ವೀಡಿಯೋ ಇದೀಗ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ.
ನಾರ್ತ್ ಕರೋಲಿನಾದ ಆಸ್ಪತ್ರೆಯೊಂದರಲ್ಲಿ ಈ ಪವಾಡ ಸದೃಶ ಘಟನೆ ನಡೆದಿದೆ. ಮಗುವಿಗೆ ಜನ್ಮ ನೀಡಿದ ಕೆಲವೇ ಘಂಟೆಗಳಲ್ಲಿ ಶೆಲ್ಲಿ ಕೌಲಿ ಎಂಬ ಯುವತಿ ಕೋಮಾ ಸ್ಥಿತಿಗೆ ತಲುಪಿದರು. ಸಂಬಂಧಿಕರೆಲ್ಲರೂ ಶೆಲ್ಲಿ ಮೇಲೆ ಆಸೆಯನ್ನೇ ಬಿಟ್ಟು ಬಿಟ್ಟರು. ಆದರೆ ವಿಧಿಯ ನಿಯಮ ಬೇರೆಯೇ ಆಗಿತ್ತು. ಶೆಲ್ಲಿ ಕೋಮಾ ಸ್ಥಿತಿಯಿಂದ ಸಹಜ ಸ್ಥಿತಿಗೆ ಬಂದೇ ಬಿಟ್ಟರು. ಅದು ಸಾಧ್ಯವಾಗಿದ್ದು ಆಕೆಯ ಪುಟ್ಟ ಪಾಪುವಿನ ಅಳುವಿನಿಂದ.
ಶೆಲ್ಲಿಯ ಪ್ರಸವ ದಿನಕ್ಕಿಂತ ಸರಿಯಾಗಿ ಒಂದು ತಿಂಗಳ ಹಿಂದೆ ಆಕೆಯ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗಮನಕ್ಕೆ ಬಂದಿತ್ತು. ಹೆರಿಗೆಗಾಗಿ  ಆಸ್ಪತ್ರೆಗೆ ದಾಖಲಿದಾಗ ಆಕೆಗೆ ರಕ್ತದೊತ್ತಡ ಹೆಚ್ಚಾಗತೊಡಗಿತು. ಪ್ರಾಣಕ್ಕೆ ಕುತ್ತು ಬರುವಷ್ಟು ರಕ್ತದೊತ್ತಡ, ಅದರ ನಡುವೆಯೇ ಆಕೆ ಪಾಪು ರೈಲಾನ್ ಗೆ  ಜನ್ಮ ನೀಡಿದಳು. ಹೆರಿಗೆ ಆದ ನಂತರ ಶೆಲ್ಲಿಗೆ ಏನೂ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಸ್ಪಲ್ಪ ಸಮಯದ ನಂತರ ಶೆಲ್ಲಿಯ ಶ್ವಾಸಕೋಶದಲ್ಲಿ ಪ್ಲುಯೆಡ್ ತುಂಬಿ ಆಕೆಗೆ ಶ್ವಾಸೋಚ್ವಾಸಕ್ಕೆ ತೊಂದರೆಯಾಗುತ್ತಿದೆ ಎಂದು ವೈದ್ಯರು ಹೇಳಿದಾಗ ಕುಟುಂಬದವರು ಕಂಗಾಲಾದರು.  ರೈಲಾನ್‌ನ ತೂಕದ ಕಾರಣ ಹೆಪ್ಪು ಕಟ್ಟಿದ ರಕ್ತ ಹೆರಿಗೆಯಾದ ಕೂಡಲೇ ಶ್ವಾಸಕೋಶಕ್ಕೆ ಹೋಗಿ ಬಿಟ್ಟಿತ್ತು! 
ಎದೆ ಬಿಡಿತ ಜೋರಾಗುತ್ತಿದ್ದಂತೆ ಶೆಲ್ಲಿಯ ರಕ್ತದೊತ್ತಡ ಅಪಾಯ ಸ್ಥಿತಿಗೆ ಆಕೆಯನ್ನು ನೂಕಿತ್ತು.  ಆಕೆಯನ್ನು ವೆಂಟಿಲೇಟರ್‌ಗೆ ಶಿಫ್ಟ್ ಮಾಡಲಾಯಿತು. ಆವಾಗ ಅಲ್ಲಿಯ ವೈದ್ಯರು ಅಮ್ಮ ಶೆಲ್ಲಿಯನ್ನು ಎಚ್ಚರಿಸಲು ಮಗುವಿನಿಂದಲೇ ಸಾಧ್ಯ , ಸ್ಕಿನ್ ಟು ಸ್ಕಿನ್ ರೀತಿಯನ್ನು ಪ್ರಯೋಗ ಮಾಡುವುದೊಳಿತು ಎಂದು ಹೇಳಿದರು.
ಅವರು ಮಗುವನ್ನು ಶೆಲ್ಲಿ ಪಕ್ಕ ತೆಗೆದುಕೊಂಡು ಹೋಗಿ ಆಕೆಗೆ ತಾಗುವಂತೆ ಮಲಗಿಸಿದರು. ಮಗುವಿನ ಸ್ಪರ್ಶ ಹಾಗೂ ಪರಿಮಳದಿಂದ ಅಮ್ಮನಿಗೆ ಪ್ರಜ್ಞೆ ಬರಬಹುದು, ಆಕೆ ಮತ್ತೆ ಮೊದಲಿನಂತಾಗಬಹುದು ಎಂಬ ವಿಶ್ವಾಸ ವೈದ್ಯರಿಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಹುಟ್ಟಿದ ಈ ಮಗುವಿಗೆ ಮಾತ್ರ ಅಮ್ಮನನ್ನು ಬದುಕಿಸಲು ಸಾಧ್ಯ ಎಂದು ಅವರು ಹೇಳಿದರು. ಹಾಗೆ ಪಾಪು ರೈಲಾನ್‌ನ್ನು ಅಮ್ಮನ ಎದೆಯ ಮೇಲೆ ಮಲಗಿಸಿದರು. ಪಾಪು ಚೆನ್ನಾಗಿ ನಿದ್ದೆ ಮಾಡಿತು. ಮಗು ಅತ್ತರೆ, ಆ ದನಿ ಕೇಳಿ ಅಮ್ಮ ನ ದೇಹದಲ್ಲಿ ಬದಲಾವಣೆಯಾಗಬಹುದು ಎಂದು ಮಗುವಿಗೆ ಮೆಲ್ಲನೆ ಚಿವುಟಿದರು. ಮಗುವಿನ ಸ್ಪರ್ಶವಾದೊಡನೆ ಶೆಲ್ಲಿಯ ದೇಹದಲ್ಲಿ ಬದಲಾವಣೆಗಳಾದವು. ಮಗುವಿನ ಅಳು ಕೇಳಿದೊಡನೆ ಆಕೆಯ ದೇಹದಲ್ಲಿ ಚೈತನ್ಯ ತುಂಬಿತು. ವೈದ್ಯರ ಪ್ರಯತ್ನ ಸಫಲವಾಗಿತ್ತು. ಒಂದು ವಾರದ ನಂತರ ಶೆಲ್ಲಿ ನಿದ್ದೆಯಿಂದ ಎದ್ದಂತೆ ಕೋಮಾ ಸ್ಥಿತಿಯಿಂದ ಸಹಜ ಸ್ಥಿತಿಗೆ ಮರಳಿ ಬಂದರು.
ನಾನಿಂದು ಬದುಕಿರುವುದಕ್ಕೆ ರೈಲಾನ್ ಕಾರಣ. ಅವಳು ಸ್ವಲ್ಪ ದೊಡ್ಡವಳಾದಾಗ ನೀನು ಅಮ್ಮನನ್ನು ರಕ್ಷಿಸಿದವಳು ಎಂದು ಹೇಳಲು ನನ್ನ ಮನಸ್ಸು ತುಡಿಯುತ್ತಿದೆ.  ಕಳೆದ ವಾರವಷ್ಟೇ ಶೆಲ್ಲಿ ತನ್ನ ಪತಿ ಜೆರಿಮಿ ಕೌಲಿ ಜತೆ ರೈಲಾನ್  ಪುಟ್ಟಿಯ ಹುಟ್ಟು ಹಬ್ಬ ಆಚರಿಸಿದ್ದಾರೆ. 35ರ ಹರೆಯದ ಜೆರಿಮಿ ವೈಎಂಸಿಎ ಡೈರೆಕ್ಟರ್ ಆಗಿದ್ದು ಶೆಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com