ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ: ಪಾಕ್‌ ಮಾಜಿ ರಾಯಭಾರಿ

ಪಾಕಿಸ್ತಾನ ಮತ್ತು ಭಾರತ ಮಧ್ಯೆ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಇಸ್ಲಾಮಾಬಾದ್‌...
ಹುಸೇನ್ ಹಕ್ಕಾನಿ(ಸಂಗ್ರಹ ಚಿತ್ರ)
ಹುಸೇನ್ ಹಕ್ಕಾನಿ(ಸಂಗ್ರಹ ಚಿತ್ರ)

ವಾಷಿಂಗ್ಟನ್‌: ಪಾಕಿಸ್ತಾನ ಮತ್ತು ಭಾರತ ಮಧ್ಯೆ "ಗಡಿ ನಿಯಂತ್ರಣ ರೇಖೆಯಲ್ಲಿ ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಇಸ್ಲಾಮಾಬಾದ್‌ ಹೇಳುತ್ತಿದೆ. ಆದರೆ ವಾಸ್ತವವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವುದು ಪಾಕಿಸ್ತಾನ ಎಂದು ಅಮೆರಿಕದಲ್ಲಿ ಪಾಕಿಸ್ಥಾನದ ಮಾಜಿ ರಾಯಭಾರಿ ಹುಸೇನ್‌ ಹಕ್ಕಾನಿ ಹೇಳಿದ್ದಾರೆ.

ಎಎನ್‌ಐ ಜತೆಗೆ ಮಾತನಾಡಿರುವ ಅವರು, ಕಾಶ್ಮೀರದಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಿ ಶಾಂತಿ ಕದಡಲು ಪಾಕಿಸ್ತಾನ ಈ ರೀತಿ ಮಾಡುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಕಾಶ್ಮೀರದಲ್ಲಿನ ಸ್ಥಿತಿಯ ಬಗ್ಗೆ ಸಂತುಷ್ಟವಾಗಿದೆ' ಎಂದು ಹೇಳಿದರು.

"ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಕಡೆಯಿಂದ ಎಷ್ಟೇ ಸಂಖ್ಯೆಯಲ್ಲಿ ಕದನ ವಿರಾಮ ಉಲ್ಲಂಘನೆ ನಡೆದರೂ ಅದರಿಂದ ಭಯೋತ್ಪಾದನೆ, ಹಿಂಸೆ ಹೆಚ್ಚಬಹುದಷ್ಟೇ ಹೊರತು ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಲೀ ಅಥವಾ ಕಾಶ್ಮೀರದ ಜನರಿಗಾಗಲಿ ಯಾವುದೇ ರೀತಿಯ ಒಳಿತಾಗದು, ಭಾರತಕ್ಕೆ ಬಹಳ ದೊಡ್ಡ ಹಾನಿಯಾಗದು ಎಂದು ಹಕ್ಕಾನಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com