
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಕ್ ಸ್ಟಾರ್ ಸ್ವಾಗತ ನೀಡಿ ಸಿಲಿಕಾನ್ ವ್ಯಾಲಿಯಲ್ಲಿ ಬರಮಾಡಿಕೊಳ್ಳಲಾಯಿತು.
ಸ್ಯಾನ್ ಜೋಸ್ ನ ಎಸ್ ಎ ಪಿ ಸೆಂಟರ್ ಗೆ ಭೇಟಿ ನೀಡಿದ ಮೋದಿ ಅವರನ್ನುಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಮೋದಿ ನೀಡಿದ ವಿಷನ್ ಆಫ್ ಇಂಡಿಯಾ ಭಾಷಣ ಕೇಳಲು ಸುಮಾರು 18 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು.
ಇನ್ನು ಪ್ರಧಾನಿ ಮೋದಿ ಅವರು ಪ್ರಸಿದ್ಧ ಕಂಪನಿಗಳ ನಾಯಕರುಗಳ ಜೊತೆ ಮೀಟಿಂಗ್ ನಡೆಸಲಿದ್ದಾರೆ. ಅಮೆರಿಕಾದ ಪ್ರಸಿದ್ದ ಕಾರ್ಪೋರೇಟ್ ಸಂಸ್ಥೆಗಳ ಮುಖ್ಯಸ್ಥರಾದ ಆಪಲ್ ನ ಟಿಮ್ ಕುಕ್, ಮೈಕ್ರೋಸಾಫ್ಟ್ ನ ಸತ್ಯ ನಡೇಲಾ, ಗೂಗಲ್ ನ ಸುಂದರ್ ಪಿಚ್ಚೈ ಆಡೋಬ್ ನ ಸಂತನು ನಾರಾಯಣ್ ಅವರುಗಳ ಜೊತೆ ಸಭೆ ನಡೆಸಲಿದ್ದಾರೆ.
Advertisement