ಉಗ್ರವಾದವನ್ನು ಧರ್ಮದಿಂದ ಬೇರ್ಪಡಿಸಬೇಕಿದೆ: ನರೇಂದ್ರ ಮೋದಿ

ಉಗ್ರವಾದವನ್ನು ಧರ್ಮದಿಂದ ಬೇರ್ಪಡಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ವಿಶ್ವಸಂಸ್ಥೆ: ಉಗ್ರವಾದವನ್ನು ಧರ್ಮದಿಂದ ಬೇರ್ಪಡಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟದ ಪ್ರಮುಖ ಅಸ್ತ್ರ ಎಂದು ಉಗ್ರವಾದವನ್ನು ಧರ್ಮದಿಂದ ಬೇರ್ಪಡಿಸಬೇಕಿದೆ. ರಾಕ್ಷಸೀ ಪ್ರವೃತ್ತಿಯ ಇಸಿಸ್‌ ಉಗ್ರ ಸಂಘಟನೆಯು ಅಂತಾರಾಷ್ಟ್ರೀಯ ಸಮುದಾಯಕ್ಕೆ ಎದುರಾಗಿರುವ ಅತ್ಯಂತ ಗಂಭೀರ ಹಾಗೂ ಗುರುತರ ಸವಾಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನದ ಪಾರ್ಶ್ವದಲ್ಲಿ ಜೋರ್ಡಾನ್‌ ದೊರೆ ಅಬ್ದುಲ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೋದಿ, ಯುವಜನರು ಬುದ್ಧಿಪಲ್ಲಟಗೊಂಡು ಭಯೋತ್ಪಾದಕ ಸಂಘಟನೆಗಳಿಗೆ ಸೇರುವುದನ್ನು ತಪ್ಪಿಸಬೇಕಾದ ತುರ್ತು ಅಗತ್ಯವಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಐಸಿಸ್‌ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕಲು ಜಾಗತಿಕ ಸ್ಪಂದನ ಅಗತ್ಯವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಇಸಿಸ ಉಗ್ರ ಸಂಘಟನೆಯು ಅಂತಾರಾಷ್ಟ್ರೀಯ ಸಮುದಾಯವನ್ನು ಪ್ರಕೃತ ಬಹುವಾಗಿ ಕಾಡುತ್ತಿರುವ ಬಹಳ ದೊಡ್ಡ ಸವಾಲಾಗಿದೆ ಎಂದು ಉಭಯ ನಾಯಕರು ತಮ್ಮ ಮಾತುಕತೆಯಲ್ಲಿ ಒಪ್ಪಿಕೊಂಡರೆಂದು ವಿದೇಶ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com